Advertisement

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

07:11 PM Nov 25, 2024 | Team Udayavani |

ಕಾಪು: ಕಾಪು ಪುರಸಭೆ ವ್ಯಾಪ್ತಿಯ ವಿವಿಧೆಡೆ ಕಸ – ತ್ಯಾಜ್ಯದ ರಾಶಿಯ ಜತೆಗೆ ಬಾಟಲಿಗಳ ರಾಶಿಯೂ ಕಂಡು ಬರುತ್ತಿದ್ದು ಪೌರ ಕಾರ್ಮಿಕರು ಅಪಾಯದ ಎಚ್ಚರಿಕೆಯೊಂದಿಗೆ ಕೆಲಸ ನಿರ್ವಹಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

Advertisement

ಪುರಸಭೆ ವ್ಯಾಪ್ತಿಯ ಬೀಡು ಬದಿ ವಾರ್ಡ್‌ನಲ್ಲಿ ಪೌರ ಕಾರ್ಮಿಕರು ಹುಲ್ಲು ಕತ್ತರಿಸುತ್ತಿದ್ದಾಗ ಬಿಯರ್‌ ಬಾಟಲಿ ಸಹಿತ ಮದ್ಯದ ಬಾಟಲಿಗಳು ಸಿಗುತ್ತಿದ್ದು ಇದರಿಂದಾಗಿ ಪೌರ ಕಾರ್ಮಿಕರ ಜೀವಕ್ಕೆ ಅಪಾಯವುಂಟಾಗುತ್ತಿದೆ. ಬುಧವಾರ ಬೀಡು ಬದಿ ವಾರ್ಡ್‌ನಲ್ಲಿ ಬರುವ ಪೊಲಿಪು ರಸ್ತೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಬಿಯರ್‌ ಬಾಟಲಿಗಳು ಸಿಕ್ಕಿವೆ.

ರಸ್ತೆ ಬದಿಯಲ್ಲಿರುವ ಹುಲ್ಲಿನ ಜತೆಗೆ ಇದ್ದ ತ್ಯಾಜ್ಯ ವಸ್ತುಗಳೊಂದಿಗೆ ಬಿಯರ್‌ ಬಾಟಲಿಗಳು ಇರುವುದನ್ನು ಗಮನಿಸದೇ ಹುಲ್ಲು ಕತ್ತರಿಸುತ್ತಿದ್ದಾಗ ಪೌರ ಕಾರ್ಮಿಕರ ಕೈ ಮತ್ತು ಕಾಲಿಗೆ ಗಾಯವುಂಟಾಗಿದ್ದು ಕಣ್ಣಿಗೆ ಹಾನಿಯಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ವೈರಲ್‌ ಆಗುತ್ತಿದೆ ವಿಡಿಯೋ : ರಸ್ತೆ ಬದಿಯಲ್ಲಿ ನೂರಾರು ಬಿಯರ್‌ ಬಾಟಲಿಗಳನ್ನು ಕಂಡು ಆಶ್ಚರ್ಯ ಚಕಿತರಾದ ಪೌರ ಕಾರ್ಮಿಕರು ತಮಗೆ ಆಗಿರುವ ಗಾಯ ಮತ್ತು ಅನುಭವಿಸಿದ ಹಿಂಸೆಯ ಬಗ್ಗೆ ವಿಡಿಯೋ ಮಾಡಿದ್ದು ಎಲ್ಲೆಡೆ ವೈರಲ್‌ ಆಗುತ್ತಿದೆ. ಕಾಪು ಬೀಡು ಬದಿ ವಾರ್ಡ್‌ನ ಪುರಸಭಾ ಸದಸ್ಯ ಅನಿಲ್‌ ಕುಮಾರ್‌ ಅವರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರಲ್ಲಿ ಪೌರ ಕಾರ್ಮಿಕರ ಮನವಿ: ಸಾರ್ವಜನಿಕರು ಸಿಕ್ಕ ಸಿಕ್ಕ ಕಡೆಗಳಲ್ಲಿ ಬಾಟಲಿ, ಪ್ಲಾಸ್ಟಿಕ್‌ಗಳನ್ನು ಎಸೆಯಬೇಡಿ. ಪುರಸಭೆಯ ವಾಹನ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದ ಕಸವನ್ನು ವಾಹನಕ್ಕೆ ನೀಡಿ ಸಹಕರಿಸಿರಿ.

Advertisement

ಎಲ್ಲೆಂದರಲ್ಲಿ ಕಸ, ಬಾಟಲಿ ಎಸೆದು ಪೌರ ಕಾರ್ಮಿಕರು, ಸಾರ್ವಜನಿಕರು ಮತ್ತು ಪ್ರಾಣಿ ಪಕ್ಷಿಗಳ ಜೀವದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸುವಂತೆ ಪೌರ ಕಾರ್ಮಿಕ ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕರ ಸಹಕಾರ ಅಗತ್ಯ
ಪುರಸಭೆ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾಪಾಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಪ್ರತೀ ವಾರ್ಡ್‌ಗಳಿಗೆ ತೆರಳಿ ಕಸ ಮತ್ತು ತ್ಯಾಜ್ಯ ಸಂಗ್ರಹಿಸುತ್ತಿದ್ದು ಜನರು ಕಸ ಸಂಗ್ರಹಿಸುವ ವಾಹನಗಳಿಗೆ ಹಸಿ ಕಸ ಮತ್ತು ಒಣ ಕಸ ಸಹಿತ ತ್ಯಾಜ್ಯಗಳನ್ನು ನೀಡುವ ಮೂಲಕ ಸಹಕರಿಸಬೇಕಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಪ್ರತೀಯೊಬ್ಬ ನಾಗರಿಕರೂ ಯೋಚಿಸಬೇಕಿದೆ. ಸಾರ್ವಜನಿಕರ ಸಹಕಾರವಿಲ್ಲದೇ ಸ್ವತ್ಛ ಕಾಪು – ಸುಂದರ ಕಾಪು ಕಲ್ಪನೆ ಈಡೇರಲು ಸಾಧ್ಯವಿಲ್ಲ. ಎಲ್ಲರೂ ಸಹಕರಿಸುವ ಅಗತ್ಯವಿದೆ.
-ಅನಿಲ್‌ ಕುಮಾರ್‌, ಸದಸ್ಯರು, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next