Advertisement
ಸಂಚಾರ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಕೋಳಿ ಅಂಗಡಿ, ಹಣ್ಣು ಕಾಯಿ, ಆಟಿಕೆ, ಸಿಹಿ ತಿಂಡಿ ಸಹಿತ ವಿವಿಧ ಅಂಗಡಿಗಳ ವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆ, ಪುರಸಭೆ, ದೇವಸ್ಥಾನಗಳ ಆಡಳಿತ ಮಂಡಳಿಗಳು ಹಿಂದಿನ ವರ್ಷಗಳಿಗಿಂತ ಈ ಬಾರಿ ವಿಶೇಷ ಮುತುವರ್ಜಿ ವಹಿಸಿದ್ದವು.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕ ಮಗಳೂರು, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳ ಹಾಗೂ ಮುಂಬಯಿ ಮತ್ತಿತರ ಕಡೆಗಳಿಂದ ಲಕ್ಷಾಂತರ ಭಕ್ತರು ಈ ಪೂಜೆಗೆ ಪಾಲ್ಗೊಂಡು ಹರಕೆ ಸಮರ್ಪಿಸಿದರು.
ಮೂರೂ ಮಾರಿಗುಡಿಗಳಿಗೂ ಭಕ್ತರು ಏಕಕಾಲದಲ್ಲಿ ಆಗಮಿಸುವ ಕಾರಣ ಪ್ರತೀ ವರ್ಷ ಜನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿತ್ತು. ಈ ಬಾರಿ ಜನ ಸಂಚಾರ ಮತ್ತು ವಾಹನ ಸಂಚಾರದ ಒತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಫ್ಲೆ$ç ಓವರ್‌ನಲ್ಲೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಂಗಡಿ ಏಲಂ ವ್ಯವಸ್ಥೆ
ಪ್ರತೀ ವರ್ಷ ಎಲ್ಲೆಂದರಲ್ಲಿ ಕೋಳಿ ಅಂಗಡಿ, ಆಟಿಕೆ, ಹಣ್ಣುಕಾಯಿ ಸಹಿತ ವಿವಿಧ ಮಳಿಗೆಗಳು ಹಾಗೂ ಕೋಳಿ ಮಾಂಸ ಮಾಡಿಕೊಡುವ ಅಂಗಡಿಗಳು ಕಾಣಿಸಿಕೊಳ್ಳುತ್ತಿದ್ದವು. ಇದರಿಂದಾಗಿ ಭಕ್ತರು ವಿವಿಧ ರೀತಿಯ ತೊಂದರೆಗೆ ಒಳಗಾಗುತ್ತಿದ್ದರು. ಆದರೆ ಈ ಬಾರಿ ಪುರಸಭೆ ಮತ್ತು ಮಾರಿಗುಡಿಯ ವತಿಯಿಂದ ಸುವ್ಯವಸ್ಥಿತ ರೀತಿಯಲ್ಲಿ ಕೋಳಿ ಅಂಗಡಿ ಮತ್ತು ವಿವಿಧ ಮಳಿಗೆಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಪ್ರಶಂಸೆಗೆ ಒಳಗಾಗಿದೆ.
Related Articles
3 ಮಾರಿಗುಡಿಗಳ ಪರಿಸರದಲ್ಲೂ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸ ಲಾಗಿದ್ದು, ಆಯ್ದ ಪ್ರದೇಶಗಳಲ್ಲಿ 18 ಸಿಸಿ ಕೆಮರಾ ಮತ್ತು ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿತ್ತು. ಇದರಿಂದಾಗಿ ಸಣ್ಣಪುಟ್ಟ ಅಪರಾಧ ಪ್ರಕರಣಗಳಿಗೂ ಯಾವುದೇ ಅವಕಾಶವೇ ಇಲ್ಲದಂತಾಗಿದೆ. ಲಕ್ಷಕ್ಕಿಂತಲೂ ಹೆಚ್ಚಿನ ಭಕ್ತರು ಆಗಮಿಸಿದ್ದರೂ ಕೂಡಾ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗದೇ ಇರುವುದು ಈ ಬಾರಿಯ ವೈಶಿಷ್ಟéವಾಗಿದೆ.
Advertisement