Advertisement
141 ಕೋ. ರೂ. ವೆಚ್ಚದ ಬೃಹತ್ ಯೋಜನೆಮಂಗಳೂರು ವಿ.ವಿ. ಸಂಯೋಜಿತ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ಥಾಪನೆಗೆ ಸೆನೆಟ್ ಸಮಿತಿಯು ಮಂಜೂರಾತಿ ನೀಡಿತ್ತು. ಬೆಳಪು ಗ್ರಾ.ಪಂ. ಈ ಹಿಂದೆ ಕೊಜೆಂಟ್ರಿಕ್ಸ್ ಯೋಜನೆಯ ಪುನರ್ ವಸತಿ ಕಾಲನಿಗೆ ನೀಡಿ, ಬಳಿಕ ಕಾನೂನು ಸಮರ ನಡೆಸಿ ಮರಳಿ ತನ್ನ ತೆಕ್ಕೆಗೆ ಪಡೆದು ಕೊಂಡಿದ್ದ 68 ಎಕ್ರೆ ಸರಕಾರಿ ಜಾಗದಲ್ಲಿ 24.26 ಎಕ್ರೆ ಭೂಮಿಯನ್ನು ಕೇಂದ್ರಕ್ಕೆ ಮೀಸಲಿಟ್ಟಿತ್ತು. ಅದನ್ನು ಕೆಎಐಡಿಬಿ ಮೂಲಕವಾಗಿ ಮಂಗಳೂರು ವಿವಿಗೆ ಒಪ್ಪಿಸಿತ್ತು. 141 ಕೋ. ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿತ್ತು.
ಬೆಳಪು ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಆಡಳಿತ ಸೌಧ, ಅತಿಥಿಗೃಹ, ಅಧಿಕಾರಿಗಳ ವಸತಿ ಗೃಹ, ಬೋಧಕೇತರ ಸಿಬಂದಿಗಳ ವಸತಿಗೃಹ, ವಿಜ್ಞಾನ ಸಂಕೀರ್ಣ ಕಟ್ಟಡ, ಸಂಶೋಧನಾ ಕೇಂದ್ರ ಕಟ್ಟಡ, ನಿರ್ದೇಶಕರ ಕೊಠಡಿ, ಉಪಾಹಾರ ಗೃಹ, ಅಟೆಂಡರ್ ಬ್ಲಾಕ್ ಸಹಿತ 13 ಕಟ್ಟಡಗಳು ನಿರ್ಮಾಣಗೊಳ್ಳಲಿವೆ.
Related Articles
Advertisement
ತನಿಖೆಯಾಗಲಿಅಧ್ಯಯನ ಕೇಂದ್ರ ನಿರ್ಮಾಣ ವಿಳಂಬದಿಂದ ಗ್ರಾಮಸ್ಥರಿಗೆ ಮತ್ತು ಉನ್ನತ ಶಿಕ್ಷಣದ ಕನಸನ್ನು ಕಾಣುತ್ತಿರುವ ಬಡ ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ. ಇದೀಗ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಯಾಗಿರುವುದರಿಂದ ಅವರೇ ಅನುದಾನ ಬಿಡುಗಡೆಗೊಳಿಸಿ, ಉದ್ಘಾಟಿಸುವಂತಾಗಲಿ. ಅನುದಾನ ಒಂದು ಪಾಲನ್ನು ವಿವಿ ಬೇರೆ ಕೆಲಸಕ್ಕೆ ವಿನಯೋಗಿಸಿರುವ ಆರೋಪದ ಬಗ್ಗೆ ತನಿಖೆಯಾಗಲಿ.
-ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾ.ಪಂ. ವಿ.ವಿ.ಗೆ ಮನವಿ
ಸರಕಾರ ಬಿಡುಗಡೆಗೊಳಿಸಿದ ಪೂರ್ಣ ಹಣವನ್ನು ಬಿಡುಗಡೆಗೊಳಿಸುವಂತೆ ಮಂಗಳೂರು ವಿ.ವಿ.ಗೆ ಮನವಿ ಮಾಡಲಾಗಿದೆ. ಕೊರೊನಾ, ಅವಶ್ಯಕತೆಗೆ ತಕ್ಕಂತೆ ಸಿಗದ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಅನುದಾನ ಅಲಭ್ಯತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು, ಹಂತ ಹಂತವಾಗಿ ಒಂದೊಂದೇ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು.
-ಅಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ ಉತ್ತರ ಸಿಕ್ಕಿಲ್ಲ
ಕಾಮಗಾರಿ ವಿಳಂಬದ ಬಗ್ಗೆ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ. ಅಧಿವೇಶನದಲ್ಲಿ ಪ್ರಶ್ನೆಯನ್ನೂ ನೀಡಲಾಗಿದೆ. ಆದರೆ ಅಧಿವೇಶನ ಒಂದು ದಿನ ಮುಂಚಿತವಾಗಿ ಮುಗಿದಿದ್ದು ಉತ್ತರ ಸಿಕ್ಕಿಲ್ಲ. ಆದರೆ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು, ಸೂಕ್ತ ಅನುದಾನ ನೀಡುವಂತೆ ಒತ್ತಡ ಹೇರಲಾಗುವುದು.
-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು ಈಗ ಏನೇನು ಕೆಲಸ ಬಾಕಿ?
ಪ್ರಥಮ ಹಂತದ ಯೋಜನೆಯ ನಿರ್ಮಾಣ ಹಂತದ ಕಾಮಗಾರಿ ಪೂರ್ಣಗೊಂಡಿವೆ. ಕಟ್ಟಡಗಳಿಗೆ ಒಳಗಿನ ಕಿಟಿಕಿ ಬಾಗಿಲುಗಳ ಜೋಡಣೆ, ಬಾಗಿಲುಗಳ ಜೋಡಣೆ ಕೆಲಸ ಪ್ರಗತಿಯಲ್ಲಿದೆ. ಆರ್‌ಸಿಸಿ ಡ್ರೈನ್ ಕೆಲಸ ಶೇ. 70ರಷ್ಟು ಪೂರ್ಣಗೊಂಡಿದೆ. ಎಂಟು ಬ್ಲಾಕ್‌ಗಳಲ್ಲಿನ ವಯರಿಂಗ್ ಸಹಿತ ವಿದ್ಯುತ್ ಜೋಡಣೆ, ಪ್ಲಂಬಿಂಗ್, ಪೈಂಟಿಂಗ್, ಎಸ್‌ಟಿಪಿ ಪ್ಲಾಂಟ್, ಕಂಪೌಂಡ್ ಹಾಲ್ ನಿರ್ಮಾಣ ಸಹಿತ ಕೆಲವು ಕೆಲಸಗಳಷ್ಟೇ ಬಾಕಿಯುಳಿದಿವೆ. ಕಾಮಗಾರಿ ವಿಳಂಬಕ್ಕೆ ಕಾರಣಗಳೇನು?
ರಾಜ್ಯ ಸರಕಾರ 38.30 ಕೋ. ರೂ. ಅನುದಾನ ಮಂಜೂರು ಮಾಡಿದೆ. ಅದರಲ್ಲಿ 30.50 ಕೋ. ರೂ. ಹಣವನ್ನು ಮಂಗಳೂರು ವಿವಿ ಕಾಮಗಾರಿಯ ನಿರ್ವಹಣೆ ವಹಿಸಿಕೊಂಡಿರುವ ಕೆಎಚ್‌ಬಿ ಮೂಲಕ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಉಳಿದ ಹಣವನ್ನು ಮಂಗಳೂರು ವಿವಿ ಇತರ ಯೋಜನೆಗಳಿಗೆ ಬಳಸಿಕೊಂಡಿರುವ ಆರೋಪಗಳಿವೆ. – ರಾಕೇಶ್ ಕುಂಜೂರು