Advertisement

Kaup: ದಂಪತಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

08:24 PM Oct 10, 2024 | Team Udayavani |

ಕಾಪು: ಉಡುಪಿ ಆಸ್ಪತ್ರೆಗೆ ಹೋಗಿ ಮರಳುತ್ತಿದ್ದ ದಂಪತಿಗೆ ಕಾರು ಢಿಕ್ಕಿ ಹೊಡೆದು ಮಹಿಳೆ ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಕಾಪುವಿನಲ್ಲಿ ನಡೆದಿದೆ.

Advertisement

ಉಳಿಯಾರಗೋಳಿ ನಿವಾಸಿಗಳಾದ ಯಶವಂತ್‌ ಮತ್ತು ಅವರ ಪತ್ನಿ ಸುಮಿತ್ರಾ ಉಡುಪಿಯ ಆಸ್ಪತ್ರೆಗೆ ತೆರಳಿದ್ದು, ಆಸ್ಪತ್ರೆಯಿಂದ ಬಸ್‌ನಲ್ಲಿ ವಾಪಸು ಬಂದು ಉಳಿಯಾರಗೋಳಿಯಲ್ಲಿ ಇಳಿದಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದಾಗ ಉಡುಪಿ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಸುಮಿತ್ರಾ ಅವರ ಕೈಗೆ ಸಾಮಾನ್ಯ ಸ್ವರೂಪದ ಹಾಗೂ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next