ಪಡುಬಿದ್ರಿ: ಕಾಪು ಕ್ಷೇತ್ರದ ಪಂಚಾಯತ್‌ನಿಂದ ಜಿ. ಪಂ. ವರೆಗಿನ ಚುನಾಯಿತ ಪ್ರತಿನಿಧಿಗಳಿಗೆ ಚಿಂತನ – ಮಂಥನ ಒಂದು ದಿನದ ತರಬೇತಿ ಕಾರ್ಯಕ್ರಮವು ತೆಂಕ ಎರ್ಮಾಳಿನ ರಾಜೀವ್ ಗಾಂಧಿ ತರಬೇತಿ ಕೇಂದ್ರದಲ್ಲಿ ಫೆ. 21ರಂದು ಜರಗಿತು.
ಕಾಪು ಶಾಸಕ ವಿನಯಕುಮಾರ್ ಸೊರಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಚುನಾಯಿತ ಪ್ರತಿನಿಧಿಗಳು ತಮ್ಮ ಹಕ್ಕು, ಜವಾಬ್ದಾರಿಗಳನ್ನು ಅರಿತಿರಬೇಕು. ಜನಸಾಮಾನ್ಯರ ಜನಮನ ಗೆಲ್ಲುವ ಮೂಲಕ ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಿರಂತರವಾಗಿ ಜನಸಂಪರ್ಕದಲ್ಲಿರಬೇಕು ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತರಬೇತುದಾರರಾಗಿ ಡಾ | ಕೃಷ್ಣ ಕೋತಾಯ, ದಾಮೋದರ ಆಚಾರ್ಯ ಹಾಗೂ ಸುಧಾಕರ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 200ಕ್ಕೂ ಹೆಚ್ಚು ಪಂಚಾಯತ್, ತಾ. ಪಂ., ಜಿ. ಪಂ., ಎಪಿಎಂಸಿ ಸದಸ್ಯರು, ಕಾಪು ಪುರಸಭಾ ಸದಸ್ಯರಿಗೆ ನಾನು ಮತ್ತು ನನ್ನ ಕರ್ತವ್ಯ, ಚುನಾವಣೆಗಳನ್ನು ಎದುರಿಸುವ ಬಗ್ಗೆ, ಜನರೊಂದಿಗಿನ ಸಹಭಾಗಿತ್ವಗಳ ಬಗೆಗೆ ತರಬೇತಿಯನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು.
ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಹೆಗ್ಡೆ, ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಜಿ. ಪಂ. ಸದಸ್ಯರಾದ ಸುಧಾಕರ ಶೆಟ್ಟಿ, ವಿಲ್ಸನ್ ರೋಡ್ರಿಗಸ್, ಚಂದ್ರಿಕಾ ಕೇಳ್ಕರ್, ತೆಂಕ ಗ್ರಾ. ಪಂ. ಅಧ್ಯಕ್ಷೆ ಅರುಣಾ ಕುಮಾರಿ, ಕಿರಣ್‌ಕುಮಾರ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸೇವಾದಳದ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಪ್ರಸ್ತಾವಿಸಿದರು. ಕೆಎಫ್‌ಡಿಸಿ ನಿರ್ದೇಶಕ ವೈ. ದೀಪಕ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ತೆಂಕ ಗ್ರಾ. ಪಂ. ಉಪಾಧ್ಯಕ್ಷ ಕಿಶೋರ್‌ಕುಮಾರ್ ವಂದಿಸಿದರು.