Advertisement

ಕಾರ್ಯಕರ್ತರಿಗೆ ಮೋದಿ ಫೋನ್‌

07:35 AM Oct 31, 2017 | |

ಅಹ್ಮದಾಬಾದ್‌: ಗುಜರಾತ್‌ ಚುನಾವಣೆ ರಂಗೇರತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಬಿಜೆಪಿ ಕಾರ್ಯಕರ್ತರ ಜತೆಗೆ ಫೋನ್‌ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. 

Advertisement

ಇದು ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ಇದುವರೆಗೆ 8ರಿಂದ 10 ಕಾರ್ಯಕರ್ತರಿಗೆ ಪ್ರಧಾನಿ ಫೋನ್‌ ಮಾಡಿದ್ದಾರೆ. “ಫೋನ್‌ ಎ ಫ್ರೆಂಡ್‌’ ಎಂಬ ಶೀರ್ಷಿಕೆಯಡಿ ಅದನ್ನು ನಡೆಸಲಾಗುತ್ತಿದೆ. ಅದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆಯುತ್ತಿರುವುದರಿಂದ ಬಿಜೆಪಿ ಈ ರಣತಂತ್ರ ಪ್ರಯೋಗಿಸಿದೆ. 

ಜಾದೂಗಾರರು: ಇದೇ ವೇಳೆ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗುವ ಎಲ್ಲ ಕಾರ್ಯ ಕ್ರಮಗಳಲ್ಲಿ ಜಾದೂ ಗಾರರು ತಮ್ಮ ಕೈಚಳಕ ಪ್ರದರ್ಶಿ ಸಲಿ ದ್ದಾರೆ. ಅದಕ್ಕಾಗಿ 50 ಮಂದಿ ಜಾದೂ ಗಾರರು ನಿಯೋಜಿತರಾಗಿ ದ್ದಾರೆ.  ಡಿ.8ರಿಂದ ಕೇಂದ್ರ ಗುಜ ರಾತ್‌ ನಲ್ಲಿ ಇಂಥ ಕಾರ್ಯಕ್ರಮ ನಡೆಸಲಾಗುತ್ತದೆ.

ಶಿಸ್ತು ಕ್ರಮದ ಅಧಿಕಾರಿಗಳು ಬೇಡ: ಮತ್ತೂಂದು ಬೆಳವಣಿಗೆಯೊಂದರಲ್ಲಿ ಆಯಾ ಇಲಾಖೆಗಳಿಂದ ಶಿಸ್ತಿನ ಕ್ರಮಕ್ಕೆ ಒಳಗಾಗಿರುವ ಯಾವುದೇ ಅಧಿಕಾರಿಯನ್ನು ಚುನಾವಣ ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಬೇಡ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next