ಜೈಪುರ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ತಾರಾ ಜೋಡಿಯ ಮದುವೆಗೆಂದು ವಿಶೇಷ ಕೇಕ್ ಅನ್ನೂ ಮಾಡಿಸಲಾಗಿದ್ದು, ಆ ಕೇಕ್ ತಯಾರಿಕೆ ಬರೋಬ್ಬರಿ 48 ಗಂಟೆಗಳ ಸಮಯ ಬೇಕಾಗಿತ್ತಂತೆ!
ಹೌದು. ಈ ಜೋಡಿಯ ಮದುವೆಗೆಂದು ದೆಹಲಿಯ ಕ್ಯಾರಮೆಲ್ ಪ್ಯಾಟಿಸ್ಸೆರಿಯ ಮೈರಾ ಜುಂಜುನ್ವಾಲಾ ತಯಾರಿಸಿದ್ದಾರೆ. 5 ಹಂತಗಳಿದ್ದ ಕೇಕ್‌ನ್ನು ಬರೋಬ್ಬರಿ 4 ಲಕ್ಷ ರೂ ವೆಚ್ಚದಲ್ಲಿ ತಯಾರಿಸಲಾಗಿದೆ.
ಈ ಕೇಕ್‌ನಲ್ಲಿ ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ಬೆರ್ರಿಗಳನ್ನು ಬಳಸಲಾಗಿತ್ತು. ಸರಿಸುಮಾರು 50-60 ಬಾಕ್ಸ್‌ನ ವಿವಿಧ ರೀತಿಯ ಬೆರ್ರಿ ಬಳಕೆ ಮಾಡಿ ಒಟ್ಟು 10-12ಕೆಜಿ ತೂಕದ ಕೇಕ್ ತಯಾರಿಸಲಾಗಿತ್ತು. ವಧು ಕತ್ರಿನಾರ ಬಯಕೆಯಂತೆಯೇ ಕೇಕ್ ತಯಾರಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಬಾದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ಹೂ ಮಳೆಯ ಸ್ವಾಗತ
ಇನ್ನೊಂದತ್ತ ಮದುವೆಯಾದ ಸ್ಥಳವಾದ ಮಾಧವಪುರದಿಂದ ನವ ದಂಪತಿ ಶುಕ್ರವಾರ ಹೆಲಿಕಾಪ್ಟರ್ ಮೂಲಕ ಜೈಪುರ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.