Advertisement
ಬಹಳಷ್ಟು ವಾಹನ ದಟ್ಟಣೆಯಿಂದ ಕೂಡಿದ ಈ ರಸ್ತೆಯ ಈ ಭಾಗದಲ್ಲಿ ತ್ರಿಶಾ ಕಾಲೇಜು, ಎಸ್ವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಸಹಸ್ರಾರು ಭಕ್ತಾಧಿಗಳ ಧಾರ್ಮಿಕ ಶ್ರದ್ಧಾ ಕೇಂದ್ರವೂ ಇರುವುದರಿಂದ ಸಹಜವಾಗಿ ಸಂಚಾರ ಹಾಗೂ ವಾಹನಗಳ ದಟ್ಟಣೆಯು ಅಧಿಕವಾಗಿರುತ್ತದೆ.
Related Articles
Advertisement
ಸಂಚಾರವೇ ಸಂಕಷ್ಟಸಂಚಾರವೇ ಸಂಕಷ್ಟ. ಸ್ವಲ್ಪ ಮಟ್ಟಿಗೆ ರಸ್ತೆಯೂ ಇಲ್ಲಿ ಹಾಳಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಅಪಾಯಕಾರಿ ಸ್ಥಳದ ಬಗ್ಗೆ ಉದಯವಾಣಿ ಜನಪರ ಕಾಳಜಿಯ ವರದಿಯನ್ನೂ ಪ್ರಕಟಿಸಿತ್ತು. ಅದನ್ನು ಮನಗಂಡು ಸುರಕ್ಷತೆಗಾಗಿ ಪ್ಲಾಸ್ಟಿಕ್ ರಿಬ್ಬನ್ ಅಳವಡಿಸಲಾಗಿದೆ. ಪ್ರವಾಸಿಗರು, ವಿದ್ಯಾರ್ಥಿಗಳು, ವಾಹನ ಚಾಲಕರು ಈ ಭಾಗದಲ್ಲಿ ತುಸು ಎಚ್ಚರಿಕೆಯಿಂದ ವಾಹನ ಚಲಾಯಿಸಿರಿ.
-ಜಯಕರ್ ಕುಂದರ್, ರಿಕ್ಷಾ ಚಾಲಕ, ಕಟಪಾಡಿ ಅವಘಡಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಿ
ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಮಟ್ಟು ಬೀಚ್ಗೆ ತೆರಳುವ ಪ್ರವಾಸಿಗರು, ಕೋಟೆ, ಮಟ್ಟು, ಕಟಪಾಡಿ ಗ್ರಾಮಸ್ಥರು, ಬಸ್ಸು ಸಹಿತ ಖಾಸಗಿ ವಾಹನಗಳು ನಿರಂತರವಾಗಿ ಸಂಚರಿಸುವ ವಾಹನ ಮತ್ತು ಜನ ದಟ್ಟಣೆಯ ಪ್ರದೇಶ ಇದು. ಇಕ್ಕಟ್ಟಾದ ಈ ಪ್ರದೇಶದಲ್ಲಿ ರಸ್ತೆಯ ಅಂಚಿನಲ್ಲಿ ಈ ಗುಂಡಿ ಇದೆ. ಪಕ್ಕದಲ್ಲಿ ಆಳವಾದ ಪ್ರದೇಶವಿದೆ. ರಸ್ತೆಯ ಬದುವನ್ನು ಕಟ್ಟಿ ಎತ್ತರಿಸಿ ಈ ಭಾಗದಲ್ಲಿ ಇನ್ನಷ್ಟು ಅವಘಡಗಳು ಸಂಭವಿಸುವ ಮುನ್ನವೇ ಎಚ್ಚೆತ್ತು, ಸುರಕ್ಷತೆಯನ್ನು ಕಲ್ಪಿಸಬೇಕಾದ ಅವಶ್ಯಕತೆ ಇದೆ.
– ತುಕಾರಾಮ್ ಎಸ್. ಉರ್ವ, ಮುಖ್ಯಸ್ಥರು, ಶ್ರೀ ಕ್ಷೇತ್ರ ಪೇಟೆಬೆಟ್ಟು