Advertisement

ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ “ಕತ್ಲುಕಾನ್‌’

10:08 AM Oct 13, 2019 | Lakshmi GovindaRaju |

ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ ಕತ್ಲುಕಾನ್‌ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಸಾಗರ್‌ ಕಿಂಗ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮಹಮ್ಮದ್‌ ನಿಯಾಜುದ್ದೀನ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಈ ಹಿಂದೆ ಗೋಸಿಗ್ಯಾಂಗ್‌ ಚಿತ್ರವನ್ನು ನಿರ್ದೇಶಿಸಿದ್ದ ರಾಜು ದೇವಸಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಹೊಸ ಕಲಾವಿದರಾದ ಸಂಜೀವ್‌, ಶಿವಾಜಿನಗರ ಲಾಲು, ಕಿರಣ್‌, ನಿಯಾಜುದ್ದೀನ್‌, ಸಿಂಧುರಾವ್‌, ಸಂತಾ ಶಾ, ಸಿಂಚನ, ಶಿವಮಂಜು, ಭೈರೇಶ್‌, ಗೋವಿಂದ ರೆಡ್ಡಿ, ಶಿವು, ಅಮಾನ್‌ ಮಯೂರ್‌, ಪವನ್‌, ಶಶಿಕರ ಪಾತೂರು ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಸಂಗಮ, ಮೇಕೆ ದಾಟು ಮುಂತಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಹಾಡುಗಳಿಗೆ ಆರವ್‌ ರಿಶಿಕ್‌ ಸಂಗೀತವಿದ್ದು, ರಮೇಶ್‌ ಕೊಯಿರ ಛಾಯಾಗ್ರಹಣ, ರುದ್ರೇಶ್‌ ಸಂಕಲನ ಕಾರ್ಯವಿದೆ. ಕೌರವ ವೆಂಕಟೇಶ್‌, ಅಲ್ಪಿವೇಟ್‌ ಶಿವು ಚಿತ್ರಕ್ಕೆ ಸಾಹಸ, ಸೂರಿ ನೃತ್ಯ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next