ಇದರ ಜತೆಗೆ ದೇವಸ್ಥಾನದ ಪರಿಸರದ ಸಭಾಭವನಗಳಲ್ಲಿ ಸುಮಾರು 10 ವಿವಾಹಗಳು ನಡೆದವು. ಕಳೆದ ವರ್ಷ 125 ಜೋಡಿಗಳ ವಿವಾಹ ನೆರವೇರಿತ್ತು.
Advertisement
ದೇವಸ್ಥಾನದಲ್ಲಿ 4 ಕೌಂಟರ್‌ಗಳನ್ನು ರಚಿಸಿ 90 ಮದುವೆಗಳನ್ನು ನಿರ್ವಹಿಸಲಾಯಿತು. ಮದುವೆಗಳ ನೋಂದಣಿಗೆ ವಿಶೇಷ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ದ.ಕ. ಉಡುಪಿ, ಕಾಸರಗೋಡು ಜಿಲ್ಲೆಗಳು ಮತ್ತು ಮಡಿಕೇರಿಯಿಂದ ಬಂದ ವಧೂವರರು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಕಳೆದ ರವಿವಾರ ಇಲ್ಲಿ 56 ಜೋಡಿಗಳ ವಿವಾಹ ನೆರವೇರಿತ್ತು.
ಕಟೀಲು ದೇವಸ್ಥಾನದಲ್ಲಿ ಮದುವೆಗಳ ಸಂಖ್ಯೆ ಹೆಚ್ಚಿದ್ದುದರಿಂದ ಜನಸಂದಣೆ ಹೆಚ್ಚಾಗಿತ್ತು. ರಥಬೀದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ರಥಬೀದಿಯ ವಾಹನಗಳು ಹಳೆ ಪ್ರಾಥಮಿಕ ಶಾಲೆ ದಾರಿಯ ಮೂಲಕ ಸಾಗಲು ಅವಕಾಶ ಕಲ್ಪಿಸಲಾಗಿತ್ತು. ವಾಹನ ದಟ್ಟನೆಯ ನಿಯಂತ್ರಣಕ್ಕೆ ದೇವ ಸ್ಥಾನದ ವತಿಯಿಂದ ಖಾಸಗಿ ಟ್ರಾಫಿಕ್ ನಿರ್ವಹಣೆ ಹಾಗೂ ಭದ್ರತಾ ವ್ಯವಸ್ಥೆ ನಿಯೋ ಜಿಸಲಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಟ್ರಾಫಿಕ್ ಜಾಮ್ ಆಗಿತ್ತು. ಬೆಳಗ್ಗೆ 7.40ರಿಂದ ಆರಂಭವಾದ ಮದುವೆಗಳು 12.15ರ ತನಕ ನಡೆದಿವೆ. ಮದುವೆ ಸಾಂಗವಾಗಿ ಸಾಗಲು ನಾಲ್ಕು ವಿಶೇಷ ಕೌಂಟರ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 125 ಜೋಡಿಗಳಿಗೆ ಸರಳ ರೀತಿಯಲ್ಲಿ ವಿವಾಹ ನಡೆದಿದೆ.
– ಶ್ರೀಹರಿನಾರಾಯಣದಾಸ ಆಸ್ರಣ್ಣ, ಅರ್ಚಕರು, ಶ್ರೀ ಕ್ಷೇತ್ರ ಕಟೀಲು
Related Articles
– ಸನತ್ ಕುಮಾರ್ ಶೆಟ್ಟಿ , ಅಧ್ಯಕ್ಷ ಆಡಳಿತ ಸಮಿತಿ, ಶ್ರೀ ಕ್ಷೇತ್ರ ಕಟೀಲು
Advertisement