Advertisement
ಬೆಳಗ್ಗೆ 8ರಿಂದ ಆರಂಭವಾದ ವಿವಾಹ ಮುಹೂರ್ತ 1 ಗಂಟೆಯ ತನಕ ನಡೆಯಿತು. 25 ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಲ್ಲದೆ, ಸುಮಾರು 10 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಮದುವೆಗಳು ಸುವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ 8 ಜನ ಪುರೋಹಿತರು, ನೋಂದಣಿಗೆ 4 ಕೌಂಟರ್‌ಗಳು ಮತ್ತು ಪ್ರತ್ಯೇಕ ಸಿಬಂದಿಯನ್ನು ನಿಯೋಜಿಸಲಾಗಿತ್ತು. ರವಿವಾರ ಮತ್ತು ಹೆಚ್ಚಿನ ವಿವಾಹಗಳಿದ್ದ ಕಾರಣ ಕಟೀಲು ಪೇಟೆ ಹಾಗೂ ರಥಬೀದಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ವಾಹನ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶ ಒದಗಿಸಲಾಗಿತ್ತು ಎಂದು ಆಡಳಿತ ಮೊಕ¤ೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ತಿಳಿಸಿದ್ದಾರೆ. ಶುಚಿತ್ವಕ್ಕೆ ಒತ್ತು
ದೇವಸ್ಥಾನದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ. ಛತ್ರದಲ್ಲಿಯೂ ಭಕ್ತರ ಅನ್ನಪ್ರಸಾದಕ್ಕೆ ನೀಡುವ ಊಟದ ತಟ್ಟೆಗಳನ್ನು ಬಿಸಿನೀರಿನಂದ ತೊಳೆದು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.