Advertisement
ವಿಜಯದಶಮಿ ಅಂಗವಾಗಿ ಶನಿವಾರ ದೇವಳದಲ್ಲಿ ಎಳೆಯ ಮಕ್ಕಳಿಗೆ ವಿದ್ಯಾರಂಭ ಸಂಸ್ಕಾರ ವಿಶೇಷವಾಗಿ ನಡೆಯಿತು. ಸುಮಾರು 200ರಷ್ಟು ಮಕ್ಕಳು ವಿದ್ಯಾರಂಭ ಪ್ರಾರಂಭಿಸಿದರು. ವಿಜಯ ದಶಮಿ ದಿನ ಮಕ್ಕಳಿಗೆ ದೇವರ ಸನ್ನಿಧಿಯಲ್ಲಿ ವಿದ್ಯಾರಂಭ ಪ್ರಾರಂಭಿಸಿದರೆ ಸರಸ್ವತಿಯ ಅನುಗ್ರಹವಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ವಿಜಯ ದಶಮಿಯನ್ನು ವಿದ್ಯಾ ದಶಮಿ ಎಂದೂ ಕರೆಯುದುಂಟು. ಮಕ್ಕಳ ಕೈಯಲ್ಲಿ ಅರಶಿಣ ತುಂಡಿನ ಮೂಲಕ ಬೆಳ್ತಿಗೆ ಅಕ್ಕಿಯಲ್ಲಿ ಬರೆಸುವ ಮೂಲಕ ಅಕ್ಷರಾಭ್ಯಾಸ ಪ್ರಾರಂಭಿಸಲಾಗುತ್ತದೆ.
ಮಹಾನವಮಿಯ ದಿನವಾದ ಶುಕ್ರ ವಾರ ದಾಖಲೆಯ ಸಂಖ್ಯೆ ಅಂದರೆ 8,307 ಹೂವಿನ ಪೂಜೆಗಳು ನಡೆದರೆ, 2,213ರಷ್ಟು ವಾಹನ ಪೂಜೆ ನಡೆದವು. ಮಹಾನವಮಿ ಪ್ರಯುಕ್ತ ಭಕ್ತರಿಗೆ ಮೂಡೆ ಪ್ರಸಾದದ ಊಟ ಬಡಿಸಲಾಯಿತು. 12 ಮುಡಿ ಉದ್ದು, 36 ಮುಡಿ ಅಕ್ಕಿ ಹಿಟ್ಟನ್ನು ರುಬ್ಬಿ ದೋಣಿಯಲ್ಲಿಟ್ಟು ಮೂಡೆ
ಮಾಡಿ ವಿತರಿಸಲಾಯಿತು. ದೇವರಿಗೆ ರಾತ್ರಿ ಮುನ್ನೂರಕ್ಕೂ ಹೆಚ್ಚು ವಿವಿಧ ಆರತಿಗಳಿಂದ ಪೂಜೆ ನಡೆಯಿತು. ಇದರಲ್ಲಿ ಚಿನ್ನದ ಕೊಡ, ಬೆಳ್ಳಿಯ ವೈವಿಧ್ಯಮಯ ಆರತಿಗಳಿದ್ದವು. ವಾಹನ ಪೂಜೆ, ಊಟದ ವ್ಯವಸ್ಥೆಯಲ್ಲೂ ಗೊಂದಲ ಕಡಿಮೆಯಾಗಿಸುವಲ್ಲಿ ಈ ಬಾರಿ ದೇಗುಲದ ಆಡಳಿತ ಮಂಡಳಿ ಹಾಗೂ ಸ್ವಯಂಸೇವಕರಾಗಿ ಬಂದ ಶಾಲಾ ವಿದ್ಯಾರ್ಥಿಗಳು, ಸ್ಥಳೀಯ ಚಾಲಕರು, ಸಂಘಸಂಸ್ಥೆಗಳ ಸದಸ್ಯರ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.
Related Articles
Advertisement