Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ‘ಬಹಳ ಬೇಸರದ ವಿಷಯ ಕಲಾವಿದನಿಗೆ ಒಳ್ಳೆಯ ಮರಣವಾದರೂ ಹೀಗೆ ಆಗಬಾರದು ಎಂದು ಆಶಿಸುತ್ತೇನೆ. ಪರಿಸ್ಥಿತಿ, ವಾತಾವರಣದ ದೋಷವೂ ಇರಬಹುದು. ಮುಂಚೆ ಇಂತಹ ಘಟನೆಗಳು ಇಷ್ಟು ಪಕ್ಕ ಪಕ್ಕನೆ ಕಟೀಲು ಮೇಳದಲ್ಲಿ ಆಗಿರಲಿಲ್ಲ, 15 ದಿನಗಳ ಒಳಗೆ ಇಬ್ಬರು ಸಾವನ್ನಪ್ಪಿದ್ದಾರೆ. ಯಾವ ಮೇಳ ಅನ್ನುವುದು ಮುಖ್ಯವಲ್ಲ. ಹಿಂದೆ ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದರಾದ ಶಂಭು ಹೆಗಡೆ, ಗೇರು ಕಟ್ಟೆ ಗಂಗಯ್ಯ ಶೆಟ್ಟಿ ಸೇರಿ ಅನೇಕ ಕಲಾವಿದರು ಇದೆ ರೀತಿ ಮರಣವನ್ನಪ್ಪಿದ್ದರು’ ಎಂದರು.
Related Articles
Advertisement
ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ (ಡಿ.22) ರಾತ್ರಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಡಿ. 5 ರಂದು ಕಟೀಲು ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ ಅಚ್ಯುತ ನಾಯಕ್ ( 45) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.