Advertisement

ಕಟಪಾಡಿ ಗ್ರಾಮ ಪಂಚಾಯತ್ ಆಡಳಿತದ ಗದ್ದುಗೆ ಏರಿದ ಕಾಂಗ್ರೆಸ್

08:58 PM Feb 16, 2021 | Team Udayavani |

ಕಟಪಾಡಿ : ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಇಂದಿರಾ ಆಚಾರ್ಯ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಎ ಆರ್ ಆಯ್ಕೆಗೊಂಡಿರುತ್ತಾರೆ.

Advertisement

ಒಟ್ಟು 26 ಸದಸ್ಯ ಬಲದ ಕಟಪಾಡಿ ಗ್ರಾಮ ಪಂಚಾಯತ್ ನಲ್ಲಿ ಕವಿತಾ ಸುವರ್ಣ ಅವರು ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಇಂದಿರಾ ಎಸ್ ಆಚಾರ್ಯ ವಿರುದ್ಧ ಸ್ಪರ್ಧೆಗಿಳಿದಿದ್ದರು.

ಬಿಜೆಪಿ ಬೆಂಬಲಿತ ಸುಭಾಸ್ ಬಿಲ್ಲವ ಇವರು ಅಬೂಬಕ್ಕರ್ ವಿರುದ್ಧ ಸ್ಪರ್ಧೆಗೆ ಕಣದಲ್ಲಿದ್ದರು ಅಂತಿಮವಾಗಿ 16 :10 ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತರು ಆಡಳಿತದ ಗದ್ದುಗೆ ಹಿಡಿದಿರುತ್ತಾರೆ.

ಕೋಟೆ :ಕಾಂಗ್ರೆಸ್ ತೆಕ್ಕೆಗೆ

Advertisement

ಕಟಪಾಡಿ: ಒಟ್ಟು 15 ಸದಸ್ಯ ಬಲದ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂ.ಬೆಂಬಲಿತರಾದ ಕಿಶೋರ್ ಕುಮಾರ್ ಅಂಬಾಡಿ ಅವರು ಪ್ರತಿಸ್ಪರ್„ ಬಿ.ಬೆಂ. ಯೋಗೀಶ್ ವಿರುದ್ಧ 8:7 ಮತಗಳ ಅಂತರದಲ್ಲಿ ಗೆಲುವನ್ನು ಸಾ„ಸಿರುತ್ತಾರೆ. ಉಪಾಧ್ಯಕ್ಷರಾಗಿ ಕಾಂ.ಬೆಂ. ಪ್ರಮೀಳಾ ಪಿ. ಜತ್ತನ್ನ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next