ಕಿನ್ನಿಗೋಳಿ : ಕಳೆದ ನಾಲ್ಕು ತಿಂಗಳ ಹಿಂದೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದ ಕೆಂಚನಕೆರೆಯ ಸಮೀಪದ ಅಂಗರಗುಡ್ಡೆ ಯುವಕ ಆದರ್ಶ ದಾಸ್ ಅವರು ರಾತ್ರಿ ಪಾನ್ ಅಂಗಡಿಯಲ್ಲಿ ಕೆಲಸ ಮುಗಿಸಿ ನಾಸಿಕ್‌ನಲ್ಲಿರುವ ತಮ್ಮ ಮನೆಗೆ ತೆರಳುತ್ತಿರುವಾಗ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಸಂದರ್ಭ ಅಂಗರಗುಡ್ಡೆಯಲ್ಲಿರುವ ಮೃತನ ಮನೆಯವರ ತೀವ್ರ ಅಸಹಾಯಕತೆಯನ್ನು ಮನಗಂಡು ಅತಿಕಾರಿಬೆಟ್ಟು ಗ್ರಾ.ಪಂ. ಮಾಜಿ ಸದಸ್ಯ ಜೀವನ್ ಶೆಟ್ಟಿ ಅಂಗರಗುಡ್ಡೆ, ನಾಸಿಕ್‌ನ ಪಾನ್ ಅಂಗಡಿ ಮಾಲಕ ಅನಿಲ್ ಪೂಜಾರಿ, ಶಿಮಂತೂರು ನಿವಾಸಿ ಪ್ರತೀಕ್ ಶೆಟ್ಟಿ ಮತ್ತಿತರರು ಸೇರಿ ಆ್ಯಂಬುಲೆನ್ಸ್ ಮೂಲಕ ನಾಸಿಕ್‌ನಿಂದ ಮೃತದೇಹವನ್ನು ಹುಟ್ಟೂರಾದ ಮೂಲ್ಕಿ ಅಂಗರಗುಡ್ಡೆಗೆ ತರಿಸಿ ಅಂತಿಮ ಕ್ರಿಯಾಕರ್ಮಗಳಲ್ಲಿ ಸಹಕರಿಸಿದ್ದರು.
ಆದರೆ ಮಾನವೀಯತೆ ತೋರಿ ಅಂತಿಮ ಕ್ರಿಯೆಗಳಲ್ಲಿ ಸಹಾಯಹಸ್ತ ಮಾಡಿದ ಮೂವರ ಮೇಲೆ ಮೃತ ಆದರ್ಶ ದಾಸ್ ಮನೆಯವರು ನಾಸಿಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಇದರಿಂದಾಗಿ ಸಹಾಯ ಮಾಡಿದವರು ಸಂಪೂರ್ಣ ಕುಗ್ಗಿ ಹೋಗಿದ್ದು ಮೂಲ್ಕಿಯ ಅಂಗರಗುಡ್ಡೆಯಿಂದ ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ಅಲೆದಾಡುವಂತಾಯಿತು ಎಂದು ಜೀವನ್ ಶೆಟ್ಟಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಹೆಣ್ಣಿಗೆ ದುಡಿಯಲು ಒತ್ತಾಯಿಸುವಂತಿಲ್ಲ: ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ತೀರ್ಪು