Advertisement
ಕಳೆದ 2-3 ದಿನಗಳಿಂದ ಸುರಿದ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ, ಉರಿ ಬಿಸಿಲ ಪರಿಣಾಮ ಜನಜನಿತವಾಗಿರುವ ಮಟ್ಟುಗುಳ್ಳದ ಬೆಳೆ ಹಾನಿಗೊಂಡು ಬೆಳೆಗಾರರು ನಷ್ಟವನ್ನು ಅನುಭವಿಸುವಂತಾಗಿದೆ. ಮಟ್ಟುಗುಳ್ಳದ ಗದ್ದೆಯಲ್ಲಿ ನೀರು ನಿಂತಿದೆ. ಹಾಗಾಗಿ ಮಟ್ಟುಗುಳ್ಳ ಗಿಡದ ಬೇರು ಕೊಳೆಯಲಾರಂಭಿಸಿದೆ. ಬಿಟ್ಟಿರುವ ಹೂವು ಉದುರಲು ಶುರುವಿಟ್ಟಿದೆ. ಬೆಳೆಯುತ್ತಿರುವ ಮಿಡಿ ಮಟ್ಟುಗುಳ್ಳ ನೆಲ ಕಚ್ಚುತ್ತಿದೆ. ಹಾಗಾಗಿ ಬೆಳೆಗಾರರು ಸಂಕಷ್ಟವನ್ನು ಎದುರಿಸುವಂತಾಗಿದೆ.
Related Articles
Advertisement
ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದು ಲಾಂಛನ (ಸ್ಟಿಕ್ಕರ್)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶ ವಿದೇಶಗಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತಿರುವ ಮಟ್ಟುಗುಳ್ಳ ಬೆಳೆಯು ಕೈ ಕೊಟ್ಟಿದ್ದು, ಬಂಡವಾಳ ಹಾಕಿದ ಬೆಳೆಗಾರರು ಆರ್ಥಿಕ ನಷ್ಟದಿಂದ ಕಂಗಾಲಾಗಿದ್ದಾರೆ.
ಫಸಲಿಗೆ ಹಾನಿ,ಬೆಲೆ ಏರಿಕೆಶುಭ ಕಾರ್ಯಗಳ ನಿಮಿತ್ತ ಬಹು ಬೇಡಿಕೆಯುಳ್ಳ ಜನಪ್ರಿಯ ಮಟ್ಟುಗುಳ್ಳವು ಅಕಾಲಿಕಮಳೆಯಿಂದ ಬಾಧಿತವಾಗಿದೆ. ಮಟ್ಟುಗುಳ್ಳದ ಫಸಲು ಉದುರಲು ಆರಂಭಿಸಿದ್ದು,ಬೇಡಿಕೆಯಷ್ಟು ಮಟ್ಟುಗುಳ್ಳವನ್ನು ಮಾರುಕಟ್ಟೆಗೆಪೂರೈಸಲು ಸಾಧ್ಯವಾಗುತ್ತಿಲ್ಲ. ಇಳುವರಿ ಕುಂಠಿತ, ಬೇಡಿಕೆ ಹೆಚ್ಚಳದಿಂದ ಸ್ವಾಭಾವಿಕವಾಗಿಬೆಲೆಯಲ್ಲೂಏರಿಕೆಯಾಗಿದ್ದು ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು120-130 ರೂ.ಗೆ ಮಾರಾಟವಾಗುತ್ತಿದೆ. ಮಟ್ಟು ಪ್ರದೇಶದಿಂದ ಕೈಪುಂಜಾಲು ವರೆಗಿನ ಸುಮಾರು 80ಎಕರೆಗೂ ಅಧಿಕ ಪ್ರದೇಶದ ಪ್ರಸಕ್ತ ಸಾಲಿನ ಪ್ರಥಮ ಇಳುವರಿ (ಕೊಯ್ಲು) ಮೂರು ವಾರಗಳ ಫಸಲು ಪ್ರಕೃತಿ ವೈಪರೀತ್ಯಕ್ಕೆ ಬಲಿಯಾಗಿದೆ.
-ಲಕ್ಷ್ಮಣ್ ಮಟ್ಟು, ಮ್ಯಾನೇಜರ್, ಮಟ್ಟುಗುಳ್ಳ
ಬೆಳೆಗಾರರ ಸಂಘ,ಮಟ್ಟು ಸೂಕ್ತಪರಿಹಾರ
ಈಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಲಾಗುವುದು. ಪ್ರಕೃತಿ ವಿಕೋಪನಿಧಿಯಡಿ ಸೂಕ್ತಪರಿಹಾರವನ್ನು ಒದಗಿಸುವಲ್ಲಿ ಕ್ರಮ ವಹಿಸಲಾಗುವುದು.
– ಎಲ್. ಹೇಮಂತ್ ಕುಮಾರ್,ಹಿರಿಯ
ಸಹಾಯಕನಿರ್ದೇಶಕರು, ತೊಟಗಾರಿಕಾಇಲಾಖೆ *ವಿಜಯ ಆಚಾರ್ಯ ಉಚ್ಚಿಲ