Advertisement

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಹಸುರು ಆಸ್ಪತ್ರೆ ಪ್ರಶಸ್ತಿ

01:00 AM Feb 27, 2019 | Harsha Rao |

ಮಣಿಪಾಲ: ಫ‌ಲಿತಾಂಶ ಆಧರಿತ ಆರೋಗ್ಯ ರಕ್ಷಣೆಯಲ್ಲಿ ಫೆ. 15 ಮತ್ತು 16ರಂದು ದಿಲ್ಲಿಯಲ್ಲಿ ನಡೆದ 6ನೇ ಜಾಗತಿಕ ಸಮಾವೇಶದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಭಾರತೀಯ ಆರೋಗ್ಯ ಸೇವಾ ಪೂರೈಕೆದಾರರ ಸಂಘ (ಅಸೋಸಿಯೇಶನ್‌ ಆಫ್ ಹೆಲ್ತ್‌ಕೇರ್‌ ಪ್ರೊವೈಡರ್ ಆಫ್ ಇಂಡಿಯಾ)ದಿಂದ ಹಸುರು ಆಸ್ಪತ್ರೆ (ಗ್ರೀನ್‌ ಹಾಸ್ಪಿಟಲ…) ಪ್ರಶಸ್ತಿ ಲಭಿಸಿದೆ.

Advertisement

2019ರ ಸಾಲನ್ನು “ರೋಗಿ ಕೇಂದ್ರಿತ ವರ್ಷ’ವಾಗಿ ಕೆಎಂಸಿ ಆಚರಿಸುತ್ತಿದ್ದು, ಈ ಪ್ರಶಸ್ತಿಯಿಂದ ಆಚರಣೆಗೆ ಇನ್ನಷ್ಟು ಸ್ಫೂರ್ತಿ ದೊರೆತಿದೆ. ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಜನರಲ್‌ ವಿ.ಕೆ. ಸಿಂಗ್‌, ಸಂಸದ ಅನಿಲ್‌ ಅಗರ್ವಾಲ್‌ ಪ್ರಶಸ್ತಿ ಪ್ರದಾನಿಸಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ, ಕಾರ್ಯಾಚರಣೆ ವಿಭಾಗದ ಹಿರಿಯ ವ್ಯವಸ್ಥಾಪಕ ಜಿಬು ಥಾಮಸ್‌, ಜೋಬಿತಾ ಬಾರ್ನೆಸ್‌ ಅವರ 
ತಂಡವು ಭಾರತೀಯ ಆರೋಗ್ಯ ಸೇವಾ ಪೂರೈಕೆದಾರರ ಸಂಘದ ಅಧಿಕಾರಿಗಳು ಮತ್ತು ಲೆಕ್ಕಪರಿಶೋಧಕರ ಆಸ್ಪತ್ರೆಯ ಭೇಟಿ ಮತ್ತು ಪರಿಶೀಲನಾ ಸಮಯದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಸಂಘಟಿಸಿ ಸಹಕರಿಸಿತ್ತು.

ಈ ರಾಷ್ಟ್ರೀಯ ಮಟ್ಟದ ಗುರು ತಿಸುವಿಕೆಗೆ ಆಸ್ಪತ್ರೆ ಅನುಷ್ಠಾನಿಸಿದ ಪರಿಸರ ಸ್ನೇಹಿ ಉಪಕ್ರಮಗಳು ಕಾರಣ. ಶಕ್ತಿಯ ಉಳಿತಾಯ ಮತ್ತು ಸಂರಕ್ಷಣೆ ತಂತ್ರಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪರಿಸರ ಸ್ನೇಹಿ ಉಪಕ್ರಮ
ಆಸ್ಪತ್ರೆಯಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಿಸಲಾಗಿದೆ. ಅವೆಂದರೆ ಸಂಪೂರ್ಣ ಸೌರ ಶಕ್ತಿ 720 ಕೆಡಬ್ಲ್ಯುಪಿ ಸಾಮರ್ಥ್ಯ, ಅಪಘಾತ ಮತ್ತು ತುರ್ತು ಸೇವಾ ವಿಭಾಗ, ಮಹಿಳಾ ಮತ್ತು ಮಕ್ಕಳ ವಿಭಾಗ, ಬಹು ಅಂತಸ್ತಿನ ವಾಹನ ನಿಲುಗಡೆ, ಮರುಬಳಕೆ ನೀರು, ಎಲ…ಇಡಿ ದೀಪ, ಸ್ವಯಂಚಾಲಿತ ನಿಯಂತ್ರಣದ ಬೆಳಕಿನ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆ, ತಾಜಾ ಗಾಳಿಯ ಪ್ರಸರಣ, ನೀರಿನ ಮಿತಬಳಕೆ, ಆಸ್ಪತ್ರೆಯ ಸಂಕೀರ್ಣದಲ್ಲಿ ಹಸುರು.

Advertisement
Advertisement

Udayavani is now on Telegram. Click here to join our channel and stay updated with the latest news.

Next