Advertisement

ಕಾಶ್ಮೀರಿ ಮೌಲಾನಾ ಶ್ರೇಷ್ಠ ಸೂಫಿ ಸಂತರು: ಮಾನೆ

04:25 PM Sep 03, 2022 | Team Udayavani |

ಹಾನಗಲ್ಲ: ದಕ್ಷಿಣ ಭಾರತದ ಶ್ರೇಷ್ಠ ಸೂಫಿ ಸಂತರಲ್ಲಿ ಹಾನಗಲ್ಲಿನ ಕಾಶ್ಮೀರಿ ಮೌಲಾನಾ ಸಹ ಒಬ್ಬರು. ಇಸ್ಲಾಂ ಧರ್ಮದ ಸುನ್ನಿ ಆಧ್ಯಾತ್ಮಿಕ ವಿಷಯದಲ್ಲಿ ಅವರು ಹೊಂದಿದ್ದ ಅಪಾರ ಪಾಂಡಿತ್ಯದ ಕಾರಣದಿಂದಾಗಿ ಪರಮಗುರು ಆಗಿದ್ದರು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

Advertisement

ಪಟ್ಟಣದ ಪೀರ ಸಯ್ಯದ್‌ ಮಕ್ಬೂಲ್‌ ಅಹ್ಮದಶಾ ಖಾದ್ರಿ ಕಾಶ್ಮೀರಿ ಅವರ ದರ್ಗಾದ ಉರೂಸ್‌ ಅಂಗವಾಗಿ ನಡೆದ ಝಂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೂಲತಃ ಕಾಶ್ಮೀರ ರಾಜ್ಯದವರಾದ ಕಾಶ್ಮೀರಿ ಗುರುಗಳು ಸೂಫಿ ಪಂಥದ ಶ್ರೇಷ್ಠ ಸಹರವರ್ದಿ ಮನೆತನದಲ್ಲಿ ಜನಿಸಿದವರಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಮಾಹನಾಮಾ ಅರ್ಶದ್‌ ಎಂಬ ಉರ್ದು ಮಾಸಿಕ ಪತ್ರಿಕೆ ಹೊರತಂದಿದ್ದರು. ಅದು ಆ ಕಾಲಘಟ್ಟದ ಅಖಂಡ ಧಾರವಾಡ ಜಿಲ್ಲೆಯ ಏಕೈಕ ಉರ್ದು ಭಾಷಾ ಮಾಸಿಕ ಪತ್ರಿಕೆಯಾಗಿತ್ತು ಎಂದರು.

ಸದಾ ಗಂಭೀರ ಸ್ವಭಾವ ಹೊಂದಿದ್ದ ಅವರು, ಧಾರ್ಮಿಕ ವಿಚಾರಗಳ ಹೊರತಾಗಿ ಅನ್ಯ ವಿಚಾರಗಳಲ್ಲಿ ಚರ್ಚೆ ನಡೆಸಲು ಆಸಕ್ತಿ ತೋರುತ್ತಿರಲಿಲ್ಲ. ಅವರ ವ್ಯಕ್ತಿತ್ವ ಮತ್ತು ಸ್ವಭಾವದ ಕಾರಣದಿಂದಾಗಿ ಹಿಂದೂ-ಮುಸ್ಲಿಂ ಎಲ್ಲಾ ಸಮುದಾಯದ ಜನರಿಂದ ಅವರು ಗೌರವಿಸಲ್ಪಡುತ್ತಿದ್ದರು ಎಂದರು.

ಇಸ್ಲಾಮಿಗೆ ಸಂಬಂಧಿ ತ ಜಟಿಲವಾದ ಶರಿಯಾ ಕಾನೂನಿನ ನಿರ್ವಚನ ಮತ್ತು ಬೌದ್ಧಿಕ ವಿಚಾರಗಳಲ್ಲಿ ಅವರು ನೀಡಿದ ಮಾರ್ಗದರ್ಶನ, ಸಲಹೆ ವಿಶ್ವಮಾನ್ಯವಾಗಿದ್ದು, ಜಗತ್ತಿನ ಬಹಳಷ್ಟು ಇಸ್ಲಾಮಿಕ್‌ ವಿದ್ವಾಂಸರ ಪ್ರಶಂಸೆಗೆ ಒಳಗಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಸಯ್ಯದ್‌ ಅಹ್ಮದಬಾಷಾ ಪೀರಜಾದೆ, ಖುರ್ಷಿದ ಹುಲ್ಲತ್ತಿ, ಮತೀನ ಶಿರಬಡಗಿ, ನೌಶಾದ್‌ ರಾಣಿಬೆನ್ನೂರ, ಮುಷ್ತಾಕ್‌, ನಿಸಾರ ಪಾನವಾಲೆ ಮೊದಲದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next