Advertisement
ಹೌದು, ಕಾಶ್ಮೀರದ ಹಿಮ ಭರಿತ, ಚಳಿಯ ವಾತಾವರಣದಲ್ಲಿ ಬೆಳೆಯುವ ಸೇಬು ಹಣ್ಣನ್ನು ಬರದ ನಾಡಿನ ಕೆಂಪು ಭೂಮಿಯಲ್ಲಿ ಬೆಳೆದು ಸೈ ಎನಿಸಿಕೊಂಡವರು ಹುಮನಾಬಾದ ತಾಲೂಕಿನ ಘಾಟಬೊರಾಳ ಗ್ರಾಮದ ಪ್ರಗತಿಪರ ರೈತ ಅಪ್ಪಾರಾವ್ ಭೊಸ್ಲೆ. ಬೀದರ ನಲವತ್ತು ಡಿಗ್ರಿ ಆಸುಪಾಸು ತಾಪಮಾನ ದಾಖಲಾಗುವ, ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕುವ ಜಿಲ್ಲೆ. ತೋಟಗಾರಿಕೆಯಲ್ಲಿ ರುಚಿಕರವಾದ ದ್ರಾಕ್ಷಿ ಬೆಳೆಗೆ ಪ್ರಸಿದ್ಧವಾದ ಧರಿನಾಡಿನಲ್ಲಿ ಅಪ್ಪಾರಾವ್ ಕಾಶ್ಮೀರಿ ಸೇಬು ಬೆಳೆದು ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.
Related Articles
Advertisement
ಈ ಗಿಡಗಳು ಕಣಿವೆ ನಾಡಿನಲ್ಲಿ ಒಮ್ಮೆ ಫಸಲು ನೀಡಿದರೆ, ಇಲ್ಲಿನ ಪ್ರದೇಶದಲ್ಲಿ 6 ತಿಂಗಳ ಅಂತರದಲ್ಲಿ ಎರಡು ಬಾರಿ ಫಲ ನೀಡುತ್ತವೆ. ಇದಕ್ಕೆ ರೋಗ ಬಾಧೆಯೂ ತೀರಾ ಕಡಿಮೆ. ಒಂದು ಗಿಡಕ್ಕೆ 20-25 ಸೇಬು ನೀಡಲಿದ್ದು, ಉತ್ತಮ ಆದಾಯ ಬರಬಹುದೆಂಬ ನಿರೀಕ್ಷೆ ಇದೆ. ವಿಶೇಷ ಸೇಬು ಕೃಷಿಯನ್ನು ನೋಡಲು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮಾತ್ರವಲ್ಲ ನೆರೆಯ ಮಹಾರಾಷ್ಟ್ರದ ಆಸಕ್ತ ರೈತರು ಭೇಟಿ ಕೊಟ್ಟು, ಮಾಹಿತಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಅಪ್ಪಾರಾವ್.
ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬು ಬೆಳೆಯುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಬರದ ನಾಡು ಬೀದರ ನೆಲದಲ್ಲಿಯೂ ಕಾಶ್ಮೀರಿ ಸೇಬನ್ನು ಬೆಳೆಯುವ ಛಲ ತೊಟ್ಟು, ಈಗ ಸಾಧಿಸಿ ತೋರಿಸಿದ್ದೇನೆ. ಅಷ್ಟೇ ಅಲ್ಲ ನಮ್ಮ ವಾತಾವರಣದಲ್ಲಿ ವರ್ಷಕ್ಕೆ ಎರಡು ಬಾರಿ ಫಸಲು ಪಡೆಯುವ ವಿಶ್ವಾಸ ಇದೆ. ಸೇಬು ಕೃಷಿಯನ್ನು ವೀಕ್ಷಿಸಲು ಈ ಭಾಗದ ಜಿಲ್ಲೆಯವರು ಮಾತ್ರವಲ್ಲ, ಮಹಾರಾಷ್ಟ್ರದ ರೈತರು ಸಹ ಆಗಮಿಸಿ ಮಾಹಿತಿ ಪಡೆಯುತ್ತಿರುವುದು ಖುಷಿ ತಂದಿದೆ. -ಅಪ್ಪಾರಾವ್ ಭೋಸ್ಲೆ, ಸೇಬು ಕೃಷಿಕರು, ಘಾಟಬೊರಾಳ
ಬಿಸಿಲನಾಡು ಬೀದರನಲ್ಲೂ ಕಾಶ್ಮೀರಿ ಸೇಬನ್ನು ಬೆಳೆಯಬಹುದು ಎಂಬುದನ್ನು ಕೃಷಿಕ ಅಪ್ಪಾರಾವ್ ಭೋಸ್ಲೆ ಸಾಧಿಸಿ ತೋರಿಸಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವ ಪ್ರಗತಿಪರ ರೈತ ಆ್ಯಪಲ್ ಕೃಷಿಯನ್ನು ಯಶಸ್ವಿಯಾಗಿ ಮಾಡಿ ಯುವ ರೈತರಿಗೆ ಪ್ರೇರಣೆಯಾಗಿದ್ದಾರೆ. -ಡಾ| ಸುನೀಲಕುಮಾರ ಎನ್.ಎಂ, ಮುಖ್ಯಸ್ಥರು, ಕೆವಿಕೆ, ಬೀದರ
-ಶಶಿಕಾಂತ ಬಂಬುಳಗ