Advertisement

ನಿಖಿಲ್‌ ಚಿತ್ರಕ್ಕೆ ಕಾಶ್ಮೀರ ಪರದೇಶಿ ನಾಯಕಿ

09:56 AM Feb 05, 2020 | Lakshmi GovindaRaj |

ಇತ್ತೀಚೆಗಷ್ಟೇ ನಿಖಿಲ್‌ ಕುಮಾರ್‌ ನಾಯಕರಾಗಿದ್ದ ಹೊಸ ಸಿನಿಮಾಕ್ಕೆ ಮುಹೂರ್ತ ನಡೆದಿತ್ತು. ಲಹರಿ ಸಂಸ್ಥೆ ನಿರ್ಮಾಣದ ಈ ಚಿತ್ರವನ್ನು ತೆಲುಗು ನಿರ್ದೇಶಕರೊಬ್ಬರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟಿಸುತ್ತಿದ್ದಾರೆ. ಈಗಾಗಲೇ ಮುಹೂರ್ತ ದಿನ ನಾಯಕಿಯೊಬ್ಬಳನ್ನು ಚಿತ್ರತಂಡ ಪರಿಚಯಿಸಿತ್ತು. ಈಗ ಚಿತ್ರಕ್ಕೆ ಮತ್ತೂಬ್ಬ ನಾಯಕಿ ಸಿಕ್ಕಿದ್ದಾಳೆ. ಆಕೆ ಕಾಶ್ಮೀರ ಪರದೇಶಿ.

Advertisement

ಈಗಾಗಲೇ ತೆಲುಗಿನಲ್ಲಿ “ನರ್ತನ್‌ ಶಾಲಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕಾಶ್ಮೀರ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಪುಣೆ ಮೂಲದ ಈಕೆ ಪಾತ್ರಕ್ಕೆ ಸರಿಹೊಂದುತ್ತಾಳೆಂಬ ಕಾರಣಕ್ಕೆ ಚಿತ್ರತಂಡ ನಾಯಕಿಯಾಗಿ ಆಯ್ಕೆ ಮಾಡಿದೆ. ಇದೊಂದು ಪಕ್ಕಾ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾವಾಗಿದ್ದು, ನಿಖಿಲ್‌ ಕುಮಾರ್‌ ಇಲ್ಲಿ ಬಾಸ್ಕೇಟ್‌ ಬಾಲ್‌ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಬ್ಬ ಬಾಸ್ಕೇಟ್‌ ಬಾಲ್‌ ಪ್ಲೇಯರ್‌ ಲೈಪ್‌ನಲ್ಲಿ ಏನೇನು ನಡೆಯುತ್ತದೆ ಅನ್ನೋದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನಿಖಿಲ್‌ ಮಧ್ಯಮ ವರ್ಗದ ಬಾಸ್ಕೇಟ್‌ ಬಾಲ್‌ ಪ್ಲೇಯರ್‌ ಪಾತ್ರ ಮಾಡುತ್ತಿದ್ದು, ಇದರಲ್ಲಿ ಲವ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಇರಲಿದೆಯಂತೆ. ವಿಜಯ್‌ ಕುಮಾರ್‌ ಕೊಂಡ ಈ ಚಿತ್ರದ ನಿರ್ದೇಶಕರು. ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ತಯಾರಾಗುತ್ತಿದೆ.

ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ರಾಜೇಶ್‌ ನಟರಂಗ, ಶಿವರಾಜ್‌ ಕೆ.ಆರ್‌ ಪೇಟೆ, ಬೇಬಿ ಪ್ರಾಣ್ಯ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಕೆಲವು ಪಾತ್ರಗಳಿಗೆ ತೆಲುಗು ಮತ್ತು ಕನ್ನಡ ಪ್ರಸಿದ್ಧ ಕಲಾವಿದರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next