Advertisement

ಕಾಶ್ಮೀರ ವಿಜಯ ಯಕ್ಷಗಾನ ತಾಳಮದ್ದಳೆ: ಪೋಸ್ಟರ್ ಬಿಡುಗಡೆ

07:22 PM Dec 31, 2022 | Team Udayavani |

ಉಡುಪಿ: ಸುಶಾಸನ ಸಮಿತಿ ಆಶ್ರಯದಲ್ಲಿ ಜ. 14 ರಂದು ಉಡುಪಿಯಲ್ಲಿ ಮತ್ತು 28 ರಂದು ಮಂಗಳೂರಿನಲ್ಲಿ ನಡೆಯುವ ಕಾಶ್ಮೀರ ವಿಜಯ ರಾಷ್ಟ್ರಕ್ಕಾಗಿ ಕಲೆ ತಾಳಮದ್ದಳೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭವು ಪೇಜಾವರ ಮಠದ ಶ್ರೀರಾಮ ವಿಟ್ಠಲ ಸಭಾಂಗಣದಲ್ಲಿ ಶನಿವಾರ ನಡೆಯಿತು.

Advertisement

ಸಮಿತಿ ಗೌರವಾಧ್ಯಕ್ಷ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಕಾಶ್ಮೀರ ವೈಭವ ಆಕ್ರಮಣದಿಂದ ಕಮರಿ ಹೋಗಿತ್ತು. ಈ ವೈಭವವನ್ನು ಜಾಗೃತಿ ಮೂಡಿಸುವುದಕ್ಕೆ, ಜನಮಾನಸಕ್ಕೆ ಮುಟ್ಟಿಸುವುದಕ್ಕೆ ಯಕ್ಷಗಾನ, ತಾಳಮದ್ದಳೆ ಪ್ರಬಲವಾಗಿರುವ ಶಕ್ತಿಯಾಗಿದೆ. ಸುಧಾಕರ ಆಚಾರ್ಯರ ಸಂಕಲ್ಪ ಸಂಯೋಜನೆಯಲ್ಲಿ ಮೂಡಿರುವ ಕಾಶ್ಮೀರ ವಿಜಯ ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.

ನಾವು ಮಾಡುವ ಯಾವುದೇ ಕೆಲಸದಲ್ಲೂ ವಿಜಯ ಸಿಗಬೇಕಾದರೆ ಭಗವಂತನ ಅನುಗ್ರಹ ಅವಶ್ಯ. ದೈವ ಭಕ್ತಿö, ದೇಶಭಕ್ತಿ ಇದ್ದಾಗ ಏಳಿಗೆ ಸಾಧ್ಯವಿದೆ. ದೈವಭಕ್ತಿ ಉದ್ದೀಪನಕ್ಕೆ ಭಜನೆ, ದೇವಾಲಯ, ಪೂಜೆ, ಪುರಸ್ಕಾರಗಳು ಪೂರಕವಾದರೆ, ದೇಶಭಕ್ತಿಗೆ ಉದ್ದೀಪನಕ್ಕೆ ಸಾಕಷ್ಟು ಮಾರ್ಗಗಳಿಲ್ಲ. ದೇಶದ ಬಗ್ಗೆ ಜಾಗೃತಿ, ಆಕ್ರಮಣಗಳ ಕುರಿತಾದ ಜಾಗೃತಿ ಮೂಡಿಸುವುದೇ ಈ ರೀತಿಯ ಕಾರ್ಯ ದೇಶ ಭಕ್ತಿ ಉದ್ದೀಪನದ ಮೂಲ ಸ್ವರೂಪವಾಗಿದೆ ಎಂದರು.

ದಿ ಮೈಸೂರ್‌ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ, ಉದ್ಯಮಿ, ಮುಖಂಡ ಗುರ್ಮೆ ಸುರೇಶ್ ಶೆಟ್ಟಿ,ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಕನ್ನಡ ಮತ್ತು ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರೋ.ಎಂ.ಎಲ್. ಸಾಮಗ, ಸುಧಾಕರ ಆಚಾರ್ಯ ಉಡುಪಿ,ಪ್ರೋ. ಪವನ್ ಕಿರಣಕೆರೆ, ಬಿ. ರಮಾನಂದ ರಾವ್ ಮುಂಬೈ , ಉಮೇಶ್ ಶೆಟ್ಟಿ ಮುಂಬೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next