Advertisement
370ನೇ ವಿಧಿ ಹಿಂಪಡೆದ ಬಳಿಕ ಕಡಿಮೆ2019ರ ಆಗಸ್ಟ್ 5ರಿಂದ 2020ರ ಸೆಪ್ಟಂಬರ್ 9ರ ವರೆಗಿನ 402 ದಿನಗಳಲ್ಲಿ 211 ಭಯೋತ್ಪಾದಕ ಘಟನೆಗಳು ನಡೆದಿವೆ. ಇದರಲ್ಲಿ 194 ಭಯೋತ್ಪಾದಕರು ಹತರಾಗಿ¨ªಾರೆ. ಈ ಘಟನೆಗಳಲ್ಲಿ 49 ಸೈನಿಕರು ಹುತಾತ್ಮರಾಗಿ¨ªಾರೆ. 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಯೋತ್ಪಾದಕ ಘಟನೆಗಳು ಶೇ. 50ಕ್ಕಿಂತಲೂ ಕಡಿಮೆಯಾಗಿವೆ. 2018ರ ಜೂನ್ 29ರಿಂದ 2019ರ ಆಗಸ್ಟ್ 4ರ ವರೆಗಿನ 402 ದಿನಗಳಲ್ಲಿ 455 ಭಯೋತ್ಪಾದಕ ಘಟನೆಗಳು ನಡೆದಿದ್ದರೆ ಅನಂತರ 211 ಘಟನೆಗಳು ನಡೆದಿವೆ.
1990ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ತುಗಳು ಕಾಣಿಸಿತ್ತು. ಈ ವರ್ಷ ಕಾಶ್ಮೀರದಲ್ಲಿ 4,158 ಭಯೋತ್ಪಾದಕ ಘಟನೆಗಳು ನಡೆದಿವೆ. 564 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. 155 ಸೈನಿಕರು ಹುತಾತ್ಮರಾಗಿದ್ದಾರೆ. 1990 ರಿಂದ 2019ರ ವರೆಗೆ ಕಾಶ್ಮೀರದಲ್ಲಿ 70,830 ಭಯೋತ್ಪಾದನ ಘಟನೆಗಳು ನಡೆದಿದ್ದು, ಇದರಲ್ಲಿ 24,915 ಭಯೋತ್ಪಾದಕರು ಹತರಾಗಿ¨ªಾರೆ. ದೇಶ 5,294 ಸೈನಿಕರನ್ನು ಮತ್ತು 13,779 ಸಾಮಾನ್ಯ ಜನರನ್ನು ಕಳೆದುಕೊಂಡಿದೆ. ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ 1990ರಿಂದ ಡಿಸೆಂಬರ್ 2001ರ ವರೆಗೆ ಪ್ರತೀ ವರ್ಷ ಸರಾಸರಿ 4,300 ಭಯೋತ್ಪಾದಕ ಘಟನೆಗಳು ನಡೆಯುತ್ತಿದ್ದರೆ 2001ರ ಅನಂತರ ಕ್ಷೀಣಿಸಲಾರಂಭಿಸಿವೆ. ಒಳನುಸುಳುವಿಕೆ ಹೆಚ್ಚು !
ಆರ್ಟಿಕಲ್ 370 ಅನ್ನು ತೆಗೆದುಹಾಕಿದ ಬಳಿಕ ಭಯೋತ್ಪಾದಕ ಘಟನೆಗಳು ಕಡಿಮೆಯಾಗಿವೆೆ. ಆದರೆ ಪಾಕಿಸ್ಥಾನದಿಂದ ಉಗ್ರರ ಒಳನುಸುಳುವಿಕೆ ಹೆಚ್ಚಾಗಿದೆ. ಗೃಹ ಸಚಿವಾಲಯದ ಪ್ರಕಾರ, ಆಗಸ್ಟ್ 5ರಿಂದ 2019ರ ಜುಲೈ 2ರ ವರೆಗೆ ಪಾಕಿಸ್ಥಾನದಿಂದ 176 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, ಈ ಪೈಕಿ 111 ಭಯೋತ್ಪಾದಕರು ಒಳಗೆ ನುಸುಳಿದ್ದಾರೆ. ಆದರೆ ಬಳಿಕ ಅವರನ್ನು ಸೇನೆಯು ಹತ್ಯೆಗೈದಿದೆ. ಈ ವರ್ಷ ಜನವರಿ 1ರಿಂದ ಸೆಪ್ಟಂಬರ್ 9ರ ವರೆಗೆ 252 ದಿನಗಳಲ್ಲಿ ಸೇನೆಯು 168 ಭಯೋತ್ಪಾದಕರನ್ನು ಹತ್ಯೆಗೈದಿದೆ. ಕಳೆದ ವರ್ಷ 157 ಭಯೋತ್ಪಾದಕರನ್ನು ಕೊಲ್ಲಲಾಗಿತ್ತು.
Related Articles
2004ರಿಂದ 2013ರ ವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಈ 10 ವರ್ಷಗಳಲ್ಲಿ 9,739 ಭಯೋತ್ಪಾದಕ ಘಟನೆಗಳು ನಡೆದಿವೆ. ಇವುಗಳಲ್ಲಿ 4,005 ಭಯೋತ್ಪಾದಕರು ಹತ್ಯೆಗೀಡಾದರೆ 1,055 ಸೈನಿಕರು ಹುತಾತ್ಮರಾಗಿದ್ದರು ಮತ್ತು 2,081 ಸಾಮಾನ್ಯ ಜನರು ಪ್ರಾಣ ಕಳೆದುಕೊಂಡಿದ್ದರು. ಪ್ರತೀ ದಿನ ಒಬ್ಬ ಭಯೋತ್ಪಾದಕ ಹತ್ಯೆಯಾಗುತ್ತಿದ್ದ. 2014ರಿಂದ 2019ರ ವರೆಗೆ, 2,302 ಭಯೋತ್ಪಾದಕ ಘಟನೆಗಳು ನಡೆದಿದ್ದು, 995 ಭಯೋತ್ಪಾದಕರು ಹತ್ಯೆಗೀಡಾಗಿ¨ªಾರೆ. ಈ ಅವಧಿಯಲ್ಲಿ 419 ಸೈನಿಕರು ಹುತಾತ್ಮರಾಗಿದ್ದು, 177 ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 2014ರ ಬಳಿಕ 2 ದಿನಗಳಿಗೊಮ್ಮೆ ಓರ್ವ ಭಯೋತ್ಪಾದಕ ಹತ್ಯೆಯಾಗುತ್ತಿದ್ದಾನೆ.
Advertisement