ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸುತ್ತಿರುವುದರ ಹಿಂದೆ ಭದ್ರತಾ ಪಡೆಯನ್ನು ಪ್ರಚೋದಿಸುವ ಹುನ್ನಾರ ಅಡಗಿದೆ ಎಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಗೊತ್ತಿತ್ತು: ಮನ್ಸೂರ್ ಸೋಲಿಗೆ ಸಿದ್ದರಾಮಯ್ಯ ವ್ಯಾಖ್ಯಾನ
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಹತ್ಯೆಗೈದಾಗ ಪ್ರತೀಕಾರವಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸುತ್ತಾರೆ. ಆಗ ಜನರು ರೊಚ್ಚಿಗೇಳುವ ಮೂಲಕ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಸಂಚು ಭಯೋತ್ಪಾದಕರದ್ದಾಗಿದೆ. ಆದರೆ ಪೊಲೀಸರು ಮತ್ತು ಭದ್ರತಾ ಪಡೆಗಳು ಯಾವುದೇ ಅಮಾಯಕರನ್ನು ಗುರಿಯಾಗಿರಿಸಿ ದಾಳಿ ನಡೆಸುವುದಿಲ್ಲ, ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸುವವರೆಗೂ ನಮ್ಮ ಕರ್ತವ್ಯ ಮುಂದುವರಿಯಲಿದೆ ಎಂಬ ಭರವಸೆ ನೀಡುವುದಾಗಿ ಸಿನ್ಹಾ ಹೇಳಿದರು.
ಇತ್ತೀಚೆಗೆ ಮಹಿಳಾ ಶಿಕ್ಷಕಿ ಸೇರಿದಂತೆ ಅಮಾಯಕರನ್ನು ಗುರಿಯಾಗಿರಿಸಿ ಹತ್ಯೆ ನಡೆಸಿರುವುದು ಕೂಡಾ ವ್ಯವಸ್ಥಿತ ಸಂಚಿನದ್ದಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆ ಪ್ರತೀಕಾರದ ದಾಳಿ ನಡೆಸುವ ಮೂಲಕ ತಪ್ಪು ಎಸಗುತ್ತಾರೆ. ಆಗ ಬೃಹತ್ ಪ್ರತಿಭಟನೆ, ಹಿಂಸಾಚಾರ, ಕೋಮು ಉದ್ವಿಗ್ನತೆ ಸೃಷ್ಟಿಸುವುದು ಉಗ್ರರ ವ್ಯವಸ್ಥಿತ ಯೋಜನೆಯಾಗಿದೆ ಎಂದು ಗವರ್ನರ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಇಂತಹ ಯಾವುದೇ ನೀಚ ಕೃತ್ಯಗಳ ಮೂಲಕ ಯಶಸ್ವಿ(ಭಯೋತ್ಪಾದಕರು) ಅವಕಾಶ ನೀಡುವುದಿಲ್ಲ ಎಂದು ರಾಜ್ಯಪಾಲ ಸಿನ್ಹಾ ಖಡಕ್ ಸಂದೇಶ ರವಾನಿಸಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯ ಘಟ್ಟದಲ್ಲಿದೆ. ಹತಾಶೆಯಿಂದ ಉಗ್ರರು ಈಗ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಕೃತ್ಯದಲ್ಲಿ ತೊಡಗಿಕೊಂಡಿದೆ ಎಂದು ಸಿನ್ಹಾ ಹೇಳಿದರು.