Advertisement

ಕಾಶ್ಮೀರದಲ್ಲಿ ಹತ್ಯೆಯ ಹೊಸ ಅವರ್ತನ: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್

05:34 PM Oct 22, 2018 | udayavani editorial |

ಇಸ್ಲಾಮಾಬಾದ್‌ : ‘ ಕಾಶ್ಮೀರದಲ್ಲಿ ಅಮಾಯಕರನ್ನು ಹತ್ಯೆಗೈವ ಹೊಸ ಆವರ್ತನವನ್ನು ಭಾರತ ಆರಂಭಿಸಿದೆ ‘ ಎಂದು ಆರೋಪಿಸುವ ಮೂಲಕ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ ಮತ್ತು ಆ ಮೂಲಕ ಭಾರತವನ್ನು ಕೆರಳಿಸುವ ಕೃತ್ಯಕ್ಕೆ ಕೈ ಹಾಕಿದ್ದಾರೆ. 

Advertisement

”ಕಾಶ್ಮೀರ ಸಮಸ್ಯೆ ಮತ್ತು ಕಾಶ್ಮೀರ ಜನರ ಆಶೋತ್ತರಗಳನ್ನು  ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಮಾತುಕತೆಯ ಮೂಲಕವೇ ಇತ್ಯರ್ಥಪಡಿಸಲು ಸಾಧ್ಯ” ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಪಾಕಿಸ್ಥಾನದ ನೂತನ ಪ್ರಧಾನಿ ಇಮ್ರಾನ್‌ ಖಾನ್‌, “ಬನ್ನಿ, ಮಾತುಕತೆ ಆರಂಭಿಸೋಣ” ಎಂದು ಭಾರತಕ್ಕೆ ಕರೆ ನೀಡಿದ್ದಾರೆ.

ಇಮ್ರಾನ್‌ ಖಾನ್‌ ಅವರ ಈ ಟ್ವೀಟನ್ನು ಆಲ್‌ ಪಾರ್ಟೀಸ್‌ ಹುರಿಯತ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಮೀರ್‌ ವೇಜ್‌ ಉಮರ್‌ ಫಾರೂಕ್‌ ಅವರು ರೀ – ಟ್ವೀಟ್‌ ಮಾಡಿದ್ದಾರೆ. ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿ ಪಾಕಿಸ್ಥಾನವೂ ಒಬ್ಬ ಕಕ್ಷಿದಾರನಾಗಿರುವುದರಿಂದ ಅದು ವಿವಾದವನ್ನು ಬಗೆಹರಿಸಲು ಮಾಡಬೇಕಾದದ್ದು ಬಹಳಷ್ಟಿದೆ ಎಂದು ಮೀರ್‌ ವೇಜ್‌ ತಮ್ಮ ರೀ – ಟ್ವೀಟ್‌ ನಲ್ಲಿ ಬರೆದಿದ್ದಾರೆ. 

“ಕಾಶ್ಮೀರಿಗಳು ಪಾಕಿಸ್ಥಾನದ ಕಳಕಳಿಯನ್ನು ಪ್ರಶಂಸಿಸುತ್ತಾರೆ; ಆದರೆ ಕಾಶ್ಮೀರದಲ್ಲಿ ಭಾರತ ಸರಕಾರ ನಡೆಸುತ್ತಿರುವ ಆಘಾತಕಾರಿ ದಮನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗಾಣಿಸಲು ಕಾಶ್ಮೀರ ವಿವಾದದಲ್ಲಿ ಒಬ್ಬ ಕಕ್ಷಿದಾರನೂ ಆಗಿರುವ ಪಾಕಿಸ್ಥಾನ ಬಹಳಷ್ಟನ್ನು ಮಾಡಬೇಕಿದೆ’ ಎಂದು ಹುರಿಯತ್‌ ನಾಯಕ ಮೀರ್‌ ವೇಜ್‌ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next