Advertisement

ದೆಹಲಿಯಲ್ಲಿಯೂ ಕಾಶ್ಮೀರದಂತಹ ಪರಿಸ್ಥಿತಿ ನಿರ್ಮಾಣ : ಕಪಿಲ್ ಮಿಶ್ರಾ

07:07 PM Jun 03, 2022 | Team Udayavani |

ಪಣಜಿ: ಇಂದು ದೆಹಲಿಯಲ್ಲಿಯೂ ಕಾಶ್ಮೀರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಹಾಂಗಿಪುರಿ ಗಲಭೆಯಲ್ಲಿಯೂ ಕೆಲವರು ಅಪರಾಧಿಗಳ ಪರ ನಿಂತಿರುವುದು ಕಂಡುಬಂದಿದೆ. ಉದ್ದೇಶಪೂರ್ವಕ ಕುತಂತ್ರದಿಂದ ಹಿಂದೂಗಳ ನಂಬಿಕೆಗೆ ಧಕ್ಕೆಯಾಗುತ್ತಿದೆ. ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸಗಡ ಸರ್ಕಾರಗಳಿಗೂ ಹಿಂದೂ ವರ್ಗದ ವಿರುದ್ಧ ಹಾಗೂ ಒಂದು ವರ್ಗದ ಕಡೆಯಿಂದ ಸೂಚನೆ ನೀಡಲಾಗುತ್ತಿದೆ. ಇಂದು ಹಿಂದೂ ಸಮಾಜ ಒಗ್ಗೂಡಿ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ ಡಾ. ಚಾರುದತ್ತ ಪಿಂಗಳೆ ಮಾತನಾಡಿ 10 ನೇಯ ಅಖಿಲ ಭಾರತ ಹಿಂದೂ ಸಮಾವೇಶವು ಜೂನ್ 12 ರಿಂದ 18 ರವರೆಗೆ ಗೋವಾದಲ್ಲಿ ನಡೆಯಲಿದೆ. ಈ ಸಮಾವೇಶದ ನಂತರ “ಹಿಂದೂ ರಾಷ್ಟ್ರ ಸಂಸತ್” ಆಯೋಜಿಸಲಾಗಿದ್ದು ದೇಶ ವಿದೇಶಗಳಿಂದ ಒಂದು ಸಾವಿರ ಜನ ಹಿಂದುತ್ವವಾಧಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ದೇವಾಲಯಗಳ ಅಭಿವೃದ್ಧಿ ಮತ್ತು ಹಿಂದೂ ಪ್ರಜ್ಞೆಯ ಬೆಳವಣಿಗೆ ಕುರಿತು ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪರ ವಾದ ಮಂಡಿಸುತ್ತಿರುವ ವಕೀಲ ವಿಷ್ಣುಶಂಕರ ಜೈನ್ ಮಾತನಾಡಿ, ಈ ಧರ್ಮಸಂಸತ್‍ನಲ್ಲಿ 1991 ರ ಪೂಜಾಸ್ಥಾನ ಕಾಯ್ದೆಯನ್ನು ಪರಿಗಣಿಸಲಾಗುವುದು. ಇಡೀ ಸಂವಿಧಾನದಲ್ಲಿ ಅತ್ಯಂತ ತಪ್ಪಾಗಿರುವ ಕಾನೂನು ಒಂದಿದ್ದರೆ ಅದು 1991 ರ ಆರಾಧನಾ ಖಾಯ್ದೆಯಾಗಿದೆ. ಏಕೆಂದರೆ ನಾಗರೀಕರು ನ್ಯಾಯಾಲಯಕ್ಕೆ ಹೋಗುವುದನ್ನು ಕಾನೂನು ತಡೆಯುತ್ತದೆ. ಈ ನಿಬಂಧನೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಕಾನೂನು ಹಕ್ಕುಗಳನ್ನು ನೀಡುವ ಅಂಬೇಡ್ಕರ್ ರವರ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next