Advertisement

Union Budget 2024: ಗಯಾ, ಬೋಧ್‌ಗಯಾದಲ್ಲಿ ಕಾಶಿ ರೀತಿ ಕಾರಿಡಾರ್‌

09:52 PM Jul 23, 2024 | Team Udayavani |

ಹೊಸದಿಲ್ಲಿ: ಬಿಹಾರದ ಗಯಾದಲ್ಲಿರುವ ವಿಷ್ಣುಪಾದ ದೇವಾಲಯ ಕಾರಿಡಾರ್‌ ಮತ್ತು ಬೋದ್‌ಗಯಾದ ಮಹಾಬೋಧಿ ದೇವಾಲಯ ಕಾರಿಡಾರ್‌ನನ್ನು ವಿಶ್ವದಜೆರ್ಯ ಯಾತ್ರಿ ಮತ್ತು ಪ್ರವಾಸಿ ಆಗಿ ಅಭಿವೃದ್ಧಿ ಮಾಡಲಾಗುತ್ತದೆ. ಈ ಕ್ಷೇತ್ರಗಳನ್ನು ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

Advertisement

ವಿಷ್ಣುಪಾದ ದೇವಾಲಯ ಅತ್ಯಂತ ಪ್ರಾಚೀನ ಹಿಂದು ದೇವಾಲಯವಾಗಿದ್ದ ಫಾಲ್ಗು ನದಿ ತೀರದಿಲ್ಲಿದೆ. ಅದೇ ರೀತಿ ಮಹಾಬೋಧಿ ದೇವಾಲಯ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಎರಡು ದೇವಾಲಯಗಳನ್ನು ಕಾಶಿ ವಿಶ್ವನಾಥ ಕಾರಿಡಾರ್‌ ಮಾದರಿ ಅಭಿವೃದ್ಧಿಪಡಿಸಲಾಗುತ್ತದೆ.

ರಾಜಗಿರ್‌, ನಳಂದ
ಅಭಿವೃದ್ಧಿಗೆ ಯೋಜನೆ
ಬಿಹಾರದ ರಾಜಗಿರ್‌, ಪ್ರಾಚೀನ ವಿಶ್ವವಿದ್ಯಾಲಯ ನಳಂದ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆ ಪ್ರಕಟಿಸಿದೆ. ರಾಜಗಿರ್‌ ಹಿಂದೂ, ಬೌದ್ಧ, ಜೈನರ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 20ನೇ ತೀರ್ಥಂಕರ ಮುನಿಸುವ್ರತ ದೇಗುಲ ಮತ್ತು ಸಪ್ತರ್ಷಿ ಬ್ರಹ್ಮ ಕುಂಡ ಪುರಾತನವಾಗಿದೆ. ರಾಜಗಿರ್‌ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ನಳಂದ ವಿಶ್ವವಿದ್ಯಾಲಯದ ವೈಭವವನ್ನು ಪುನರ್‌ ಪ್ರತಿಷ್ಠಾಪಿಸುವ ಜತೆಗೆ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತಿಸಿದೆ ಎಂದು ವಿತ್ತ ಸಚಿವೆ ತಿಳಿಸಿದರು. ಜತೆಗೆ ಒಡಿಶಾವನ್ನು ರಮಣೀಯ ಸುಂದರ ಮಂದಿರ, ಸ್ಮಾರಕಗಳು, ವನ್ಯಜೀವಿ ಅಭಯಾರಣ್ಯ ಮತ್ತು ಪ್ರಾಚೀನ ಕಡಲತೀರಗಳು ಪ್ರವಾಸೋದ್ಯಮ ತಾಣವನ್ನಾಗಿ ಮಾಡಿದೆ. ಒಡಿಶಾದ ಅಭಿವೃದ್ಧಿಗೂ ಕೇಂದ್ರ ಸರ್ಕಾರ ನೆರವು ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next