Advertisement

Bihar: ಕೇಂದ್ರ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ; ಥಳಿಸಿದ ಬೆಂಬಲಿಗರು

08:52 AM Sep 01, 2024 | Team Udayavani |

ಬಿಹಾರ: ಬಿಜೆಪಿ ನಾಯಕರ ಲೋಕಸಭಾ ಕ್ಷೇತ್ರವಾದ ಬಿಹಾರದ ಬೇಗುಸರಾಯ್‌ ನಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಶನಿವಾರ (ಆ.31) ಬಂಧಿಸಿದ್ದಾರೆ.

Advertisement

ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಸಿಂಗ್ ಬೆಂಬಲಿಗರು ಥಳಿಸಿದ್ದಾರೆ. ಈತ ಕೇಂದ್ರ ಸಚಿವರ ‘ಜನತಾ ದರ್ಬಾರ್ʼ ಕಾರ್ಯಕ್ರಮಕ್ಕೆ ಮನವಿಯೊಂದಿಗೆ ಬಂದಿದ್ದರು.

“ಮೌಲ್ವಿಯಂತೆ ವೇಷಧರಿಸಿದ ಗಡ್ಡಧಾರಿಯು ನನ್ನ ಬಳಿ ಮನವಿಯೊಂದಿಗೆ ಬಂದು ಅದನ್ನು ಪರಿಶೀಲಿಸುವಂತೆ ಕೇಳಿಕೊಂಡನು. ಜನತಾ ದರ್ಬಾರ್ ಮುಗಿದಿದೆ, ಸಮಯಕ್ಕೆ ಸರಿಯಾಗಿ ಬರಬೇಕು ಎಂದು ಹೇಳಿದೆ. ಆಗ ಅವರು ನನ್ನ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಒಂದು ಹಂತದಲ್ಲಿ, ಅವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಮುಂದಾದರು” ಎಂದು ಸಚಿವ ಸಿಂಗ್ ಹೇಳಿದರು.

“ಅಲ್ಲಿ ನೆರೆದಿದ್ದ ಜನರು ಆತನನ್ನು ಹಿಮ್ಮೆಟ್ಟಿಸಿದರು, ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು,” ಎಂದು ಸಚಿವರು ಹೇಳಿದರು.

ಬೇಗುಸರಾಯ್‌ ಎಸ್‌ ಪಿ ಮನೀಶ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿತ ವ್ಯಕ್ತಿಯು ಪೊಲೀಸ್‌ ಕಸ್ಟಡಿಯಲ್ಲಿದ್ದಾನೆ. ಆತನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.