Advertisement

ವಾಲ್ಕೇಶ್ವರ ಕಾಶೀ ಮಠದಲ್ಲಿಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆಚರಣೆ

03:40 PM Jan 26, 2021 | Team Udayavani |

ಮುಂಬಯಿ : ಜಿಎಸ್‌ಬಿ ಸಮಾಜದ ಗುರುವರ್ಯರಾದ ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ
ಆಚರಣೆಯನ್ನು ಜ. 21ರಂದು ವಾಲ್ಕೇಶ್ವರದ  ಶ್ರೀ ಕಾಶೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7.30ರಿಂದ ನೈರ್ಮಲ್ಯ ವಿಸರ್ಜನೆ, ಬೆಳಗ್ಗೆ 8ರಿಂದ ಪ್ರಾತ: ಕಾಲ ಪೂಜೆ, ಸಿಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, 9.30ರಿಂದ  ಆರತಿ, ಬೆಳಗ್ಗೆ 10.30ರಿಂದ ಶ್ರೀ ವ್ಯಾಸೋಪಾಸನೆ, ಪೂರ್ವಾಹ್ನ 11.30ರಿಂದ ಭಜನ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಮಹಾಪೂಜೆ, ಆರತಿ, ಪ್ರಸಾದ ವಿತರಣೆ ನಡೆಯಿತು.

ಸಂಜೆ 6ರಿಂದ ದೀಪಾಲಂಕಾರ, ಭಜನೆ, ರಾತ್ರಿ 7.30ರಿಂದ ಶ್ರೀಮಠದ ಎದುರು ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ
ಫಲವಸ್ತುಗಳನ್ನು ವಿತರಿಸಲಾಯಿತು. ರಾತ್ರಿ 8ರಿಂದ ಪೂಜೆ ನಡೆದ ಬಳಿಕ ಪಲ್ಲಕ್ಕಿ ಉತ್ಸವ ಜರಗಿತು. ಆ ಬಳಿಕ ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿವರಿಗೆ ನುಡಿನಮನ ಸಲ್ಲಿಸಲಾಯಿತು.

ಹೇಮ ಪ್ರಕಾಶ್‌ ಶೆಣೈ ಅವರು ಮಾತನಾಡಿ, ಶ್ರೀಗಳು ಅಪಾರ ಪಾಂಡಿತ್ಯ ಹೊಂದಿದ್ದರು. ಯಾವಾಗಲೂ ನಮ್ಮ ಸಮಾಜ
ಉದ್ಧಾರವಾಗಲು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಶಿಷ್ಯವರ್ಗವು ತನ್ನ ಕಷ್ಟಗಳನ್ನು ಶ್ರೀಗಳವರಲ್ಲಿ ನಿವೇದಿಸಿದಾಗ ಶ್ರೀಗಳು
ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ನೀಡುತ್ತಿದ್ದರು. ಬಳಿಕ ಕಷ್ಟಗಳು ದೂರವಾಗಿ ಪರಿಹಾರ ಸಿಗುತ್ತಿತ್ತು ಎಂದರು.

ಇದನ್ನೂ ಓದಿ:ರೈತರ ಹೆಸರಿನಲ್ಲಿ ಗಲಭೆ ಮಾಡಿದ್ದು ಯಾರೆಂದು ಗೊತ್ತಿದೆ: ಭಾರತೀಯ ಕಿಸಾನ್ ಸಂಘ

Advertisement

ವಿಜಯ ಭಟ್‌ ಅವರು ಮಾತನಾಡಿ, ಸ್ವಾಮೀಜಿಯವರು ಪ್ರಸಕ್ತ ವಾಯು ಮಂಡಲದಲ್ಲಿದ್ದಾರೆ. ನಮ್ಮ ಸಮಾಜದ ಒಳಿತಿನಲ್ಲಿ ಭಯಸುತ್ತಿದ್ದಾರೆ. ನಾವು ಅವರನ್ನು ಧ್ಯಾನಿಸಿದರೆ ನಮ್ಮ ಕೆಲಸ ಕಾರ್ಯಗಳು ಲೋಪ ಬಾರದೆ ಈಡೇರುತ್ತವೆ ಎಂದು ಹೇಳಿದರು.
ಉದಯ ಭಟ್‌ ಅವರು ಸ್ವಾಮೀಜಿಯವರ ಪೂರ್ವಾಶ್ರಮದ ಶಾಲಾ ಜೀವನದ ಸಮಯ ಆಧ್ಯಾತ್ಮಿಕ ವಿಷಯದಲ್ಲಿ ಅಪಾರ ಆಸಕ್ತಿ
ಹೊಂದಿದ್ದರು. ಸ್ವಾಮೀಜಿಯವರ ಸ್ಮರಣ ಶಕ್ತಿ ಅಗಾಧವಾಗತ್ತು. ನಮ್ಮ ಸಮಾಜದ ಯಾವನೇ ಒರ್ವ ಸದಸ್ಯನ ಹೆಸರು ಕೇಳಿದಾಗ ಅವರು ಊರು, ಹಿರಿಯರ ಹೆಸರು ಹಾಗೂ ಇನ್ನಿತರ ಮಾಹಿತಿಗಳನ್ನು ಹೇಳುತ್ತಿದ್ದರು. ಶ್ರೀಗಳ ಭೇಟಿ ಒಂದು ಸ್ಮರಣೀಯವಾಗಿರುತ್ತಿತ್ತು.

ಶ್ರೀಗಳ ಪ್ರವಚನದಲ್ಲಿ ಅಪಾರ ಹೊಸ ಹೊಸ ವಿಷಯಗಳು ನಮಗೆ ಸಿಗುತ್ತಿತ್ತು ಎಂದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ವಾಲ್ಕೇಶ್ವರ ಶ್ರೀ ಕಾಶೀ ಮಠದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಸ್ವಯಂ ಸೇವಕರು, ಮಹಿಳಾ ಸದಸ್ಯರು ಹಾಗೂ ಇನ್ನಿತರರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next