Advertisement

ಕಾಸರಗೋಡು ಅಪರಾಧ ಸುದ್ದಿಗಳು

05:49 PM May 11, 2022 | Team Udayavani |

ಘರ್ಷಣೆ: ನಾಲ್ವರಿಗೆ ಗಾಯ
ಉಪ್ಪಳ: ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಿಂದ ನಾಲ್ವರು ಗಾಯಗೊಂಡಿದ್ದಾರೆ. ಜಗದೀಶ್‌ ಹಾಗು ಸತೀಶ್‌, ಇನ್ನೊಂದು ತಂಡದ ಮೋಹನ, ಪವಿತ್ರ ಗಾಯಗೊಂಡಿದ್ದಾರೆ. ಪೈವಳಿಕೆ ಅರಸು ರಂಗತ್ತೈ ಬಲ್ಲಾಳರು ಹಾಗು ಅವರ ಮಕ್ಕಳಾದ ಮೋಹನ, ಪವಿತ್ರಾ, ರಾಜೇಶ್‌, ಬಾಲಚಂದ್ರ ಸಹಿತ ಆರು ಮಂದಿ ಹಲ್ಲೆ ಮಾಡಿದ್ದಾಗಿ ಜಗದೀಶ್‌ ಹಾಗು ಸತೀಶ್‌ ಆರೋಪಿಸಿದ್ದಾರೆ. ಜಗದೀಶ್‌ ಹಾಗೂ ಸತೀಶ್‌ ಹಲ್ಲೆ ಮಾಡಿದ್ದಾಗಿ ಮೋಹನ ಹಾಗೂ ಪವಿತ್ರಾ ಆರೋಪಿಸಿದ್ದಾರೆ.

Advertisement

ಮನೆಯೊಳಗೆ ಬಚ್ಚಿಟ್ಟ ಅಕ್ರಮ ಕೋವಿ, ಗುಂಡು ವಶಕ್ಕೆ
ಅಡೂರು: ಮನೆಯೊಳಗೆ ಬಚ್ಚಿಟ್ಟ ಅಕ್ರಮ ಕೋವಿ ಹಾಗೂ ಗುಂಡುಗಳನ್ನು ಪೊಲೀಸರು ವಶಪಡಿಸಿದ್ದಾರೆ.

ಚಾಮಕೊಚ್ಚಿಯ ಚಿದಾನಂದನ್‌ ಆಲಿಯಾಸ್‌ ಪವಿತ್ರನ್‌(32) ಮನೆಯಿಂದ ಲೈಸನ್ಸ್‌ ರಹಿತ 2 ಕೋವಿ ಹಾಗೂ 27 ಗುಂಡುಗಳನ್ನು ಆದೂರು ಪೊಲೀಸರು ವಶಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಿದಾನಂದನ್‌ ಮನೆಯಲ್ಲಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಅಡುಗೆ ಕೊಠಡಿಯ ಅಟ್ಟದಲ್ಲಿ ಸೌದೆ ರಾಶಿಯ ಮಧ್ಯೆ ಕೋವಿಗಳನ್ನು ಬಚ್ಚಿಡಲಾಗಿತ್ತು.

ಇಗರ್ಜಿಯ ಕಾಣಿಕೆ ಹುಂಡಿಯಿಂದ ಹಣ ಕಳವು
ಹೊಸದುರ್ಗ: ಎಣ್ಣಪ್ಪಾರ ಮುಕ್ಕುಳಿ ಸೈಂಟ್‌ ಆ್ಯಂಟಣಿ ಇಗರ್ಜಿಯ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲಾಗಿದೆ. ಈ ಬಗ್ಗೆ ಅಂಬಲತ್ತರ ಪೊಲೀಸರಿಗೆ ದೂರು ನೀಡಲಾಗಿದೆ.

ಸ್ಕೂಟರ್‌-ಬೈಕ್‌ ಢಿಕ್ಕಿ : ಇಬ್ಬರಿಗೆ ಗಾಯ
ಕಾಸರಗೋಡು: ಕಾಂಞಂಗಾಡ್‌ ಬಳಿಯ ಮಾವುಂಗಾಲ್‌ನಲ್ಲಿ ಸ್ಕೂಟರ್‌-ಬೈಕ್‌ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ.

Advertisement

ಬೈಕ್‌ ಚಲಾಯಿಸುತ್ತಿದ್ದ ವೆಳ್ಳಿಕ್ಕೋತ್‌ ನಿವಾಸಿ ಮಿಥುನ್‌(24) ಹಾಗು ಸ್ಕೂಟರ್‌ ಸವಾರ ನೆಲ್ಲಿಕ್ಕಾಡ್‌ ಪೇರಡ್ಕದ ಕೈಯಿಲ್‌ ಕೇಳು(68) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಾವುಂಗಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುತ್ತಿಗೆ ಬಿಗಿದು ಕೊಲೆ ಯತ್ನ : ಪುತ್ರನ ವಿರುದ್ಧ ಕೇಸು ದಾಖಲು
ಹೊಸದುರ್ಗ: ಮಾಲೋಂ ಕರಿಚ್ಚೇರಿ ಪುಲ್ಲೋಡಿ ನಾರಾಯಣನ್‌(77) ಅವರ ಕುತ್ತಿಗೆ ಬಿಗಿದು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಜನಾರ್ದನನ್‌ ವಿರುದ್ಧ ವೆಳ್ಳರಿಕುಂಡು ಪೊಲೀಸರು ಕೇಸು ದಾಖಲಿಸಿದ್ದಾರೆ. ನಾರಾಯಣನ್‌ ವೆಳ್ಳರಿಕುಂಡು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಟೋ ರಿಕ್ಷಾ ಢಿಕ್ಕಿ : ಬೈಕ್‌ ಸವಾರನಿಗೆ ಗಾಯ
ಹೊಸದುರ್ಗ: ಮಾಲೋಂ ಶಾಲೆ ಪರಿಸರದಲ್ಲಿ ಆಟೋ ರಿಕ್ಷಾ ಢಿಕ್ಕಿ ಹೊಡೆದು ಬೈಕ್‌ ಸವಾರ ಮಾಲೋಂ ಪರಂಬ್‌ನ ಸಿಂಧು ಸದನದ ಬಿಂದು ಮೋನ್‌ ಅವರ ಪುತ್ರ ಅಭಿಜಿತ್‌(21) ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ಯ ಸಹಿತ ಬಂಧನ
ಹೊಸದುರ್ಗ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಆರೋಪದಲ್ಲಿ ನರ್ಕಿಲಕ್ಕೋಡ್‌ ಪಳ್ಳಿಕುನ್ನೇಲ್‌ನ ಪಿ.ಸಿ.ವರ್ಗೀಸ್‌ ಯಾನೆ ಜೋನ್ಸನ್‌(38)ನನ್ನು ವೆಳ್ಳರಿಕುಂಡು ಪೊಲೀಸರು ವೆಳ್ಳರಿಕುಂಡು ಬಸ್‌ ನಿಲ್ದಾಣ ಪರಿಸರದಿಂದ ಬಂಧಿಸಿದರು.

ಎರಡು ಹೊಟೇಲ್‌ಗ‌ಳು ಮುಚ್ಚುಗಡೆ
ಕಾಸರಗೋಡು: ತಳಂಗರೆಯಲ್ಲಿ ಆಹಾರ ಸುರಕ್ಷಾ ವಿಭಾಗದ ಅನುಮತಿಯಿಲ್ಲದೆ ಕಾರ್ಯಾಚರಿಸುತ್ತಿದ್ದ ಎರಡು ಹೊಟೇಲ್‌ಗ‌ಳನ್ನು ಆಹಾರ ಸುರಕ್ಷಾ ವಿಭಾಗ ಮುಚ್ಚಿಸಿದೆ.

ತಳಂಗರೆಯ ಬದರ್‌ ಹೊಟೇಲ್‌ ಹಾಗು ಒಂದು ಕ್ಯಾಂಟೀನ್‌ ಮುಚ್ಚಲಾಗಿದೆ. ಕಾಂಞಂಗಾಡ್‌ ಐಂಗೋತ್‌ನಲ್ಲಿ ಶುಚಿತ್ವವಿಲ್ಲದೆ ಕಾರ್ಯಾಚರಿಸುತ್ತಿದ್ದ ಹೊಟೇಲೊಂದನ್ನು ಮುಚ್ಚುಗಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next