Advertisement
ಟ್ಯಾಕ್ಸಿ ಸ್ಟೇಂಡ್ ಸಮೀಪದಲ್ಲಿರುವ ಸೆಪ್ಟಿಕ್ ಟ್ಯಾಂಕ್ ತುಂಬಿರುವುದರಿಂದ ಶೌಚಾಲಯ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದ್ದು, ಬದಲಿ ವ್ಯವಸ್ಥೆ ಮಾಡದೆ ಶೌಚಾಲಯ ಮುಚ್ಚಿರುವುದರಿಂದ ಬಸ್ ನಿಲ್ದಾಣದಲ್ಲಿರುವ ವರ್ತಕರು, ಪ್ರಯಾಣಿಕರು ವಿವಿಧ ಸಮಸ್ಯೆ ಅನು ಭವಿಸುವಂತಾಗಿದೆ. ಬಳಸುತ್ತಿರು ವಾಗ ಮಲಿನ ನೀರು ಮೇಲೇರುತ್ತಿರು ವುದರಿಂದ ಶೌಚಾಲಯ ಮುಚ್ಚಲಾಗಿದೆ ಎಂಬುದು ಸಂಬಂಧಪಟ್ಟವರ ಹೇಳಿಕೆ. 25 ವರ್ಷಗಳಿಗೂ ಹಳೆಯದಾ ಗಿದೆ ಸೆಪ್ಟಿಕ್ ಟ್ಯಾಂಕ್. ಆರಂಭದ ಹಂತದಲ್ಲಿ ಕಿರುಗಾತ್ರದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿತ್ತು. ಆ ಬಳಿಕ ದೊಡ್ಡ ಗಾತ್ರದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದ್ದರೂ, ಈ ವರೆಗೆ ಒಂದು ಬಾರಿ ಮಾತ್ರವೇ ಟ್ಯಾಂಕ್‌ನಿಂದ ಮಲಿನವನ್ನು ತೆರವುಗೊಳಿಸಲಾಗಿತ್ತು.
Related Articles
ಹೊಸ ಬಸ್ ನಿಲ್ದಾಣದ ಎರಡೂ ಶೌಚಾಲಯಗಳನ್ನು ಮುಚ್ಚಿರುವ ಬಗ್ಗೆ ಗಮನಕ್ಕೆ ಬಂದಿದೆ. ಆರೋಗ್ಯ ವಿಭಾಗ ಇದನ್ನು ದುರಸ್ತಿಗೊಳಿಸಬೇಕು. ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮಲಿನವನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶ ನೀಡಲಾಗುವುದು. ಹೊಸ ಬಸ್ ನಿಲ್ದಾಣದಲ್ಲಿರುವ ಇ-ಟಾಯ್ಲೆಟ್ ಕೂಡಾ ತೆರೆಯಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಕಾರಣದಿಂದ ಬಸ್ ನಿಲ್ದಾಣಕ್ಕೆ ಬರುವ ಮಹಿಳೆಯರು, ಮಕ್ಕಳು ಸಹಿತ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಶೀಘ್ರವೇ ಸಮಸ್ಯೆಗೆ ಪರಿಹಾರ ನೀಡಲಾಗುವುದು.
-ಬಿ. ಫಾತಿಮಾ ಇಬ್ರಾಹಿಂ,
ಅಧ್ಯಕ್ಷರು, ಕಾಸರಗೋಡು ನಗರಸಭೆ
Advertisement
ಇ-ಟಾಯ್ಲೆಟ್ಈ ಹಿಂದೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಇ-ಟಾಯ್ಲೆಟ್ ಸ್ಥಾಪಿಸಲಾಗಿತ್ತು. ಆದರೆ ಇ-ಟಾಯ್ಲೆಟ್ ಕೆಲವೇ ದಿನಗಳಲ್ಲಿ ಕೆಟ್ಟು ಹೋದುದರಿಂದ ಕೆಲವು ತಿಂಗಳ ಬಳಿಕ ದುರಸ್ತಿ ಗೊಳಿಸಲಾಗಿತ್ತು. ಕೆಲವು ದಿನಗಳ ತನಕ ಕಾರ್ಯಾಚರಿಸಿದ ಇ-ಟಾಯ್ಲೆಟ್ ಮತ್ತೆ ಕೆಟ್ಟು ಹೋದುದರಿಂದ ದುರಸ್ತಿ ಕಾಣದೆ ಇದೀಗ ಸಿನೆಮಾ ಪೋಸ್ಟರ್‌ಗಳ ಸಹಿತ ಪ್ರದರ್ಶಿಸುವ ಕೇಂದ್ರವಾಗಿ ಬದಲಾಗಿದೆ. ಇದೀಗ ಬಸ್ ನಿಲ್ದಾಣದಲ್ಲಿ ಮಹಿಳೆಯರ ಮತ್ತು ಗಂಡಸರ ಶೌಚಾಲಯ ಮುಚ್ಚಿದ್ದು, ಇ-ಟಾಯ್ಲೆಟ್ ಕೂಡಾ ಮುಚ್ಚಿರುವುದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ.