Advertisement

ಕಾಸರಗೋಡು: ಹೊಸ ಕೋವಿಡ್-19 ಪ್ರಕರಣವಿಲ್ಲ

12:51 AM May 09, 2020 | Sriram |

ಕಾಸರಗೋಡು: ಜಿಲ್ಲೆಯಲ್ಲಿ ಸತತ ಎಂಟನೇ ದಿನವಾದ ಶುಕ್ರವಾರ ಕೂಡ ಹೊಸದಾಗಿ ಕೋವಿಡ್-19 ಸೋಂಕು ಪ್ರಕರಣ ದಾಖ ಲಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 178 ಮಂದಿ ಸೋಂಕು ಖಚಿತಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈಗ ಕೇವಲ ಓರ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ.

Advertisement

ಕೇರಳದಲ್ಲಿ ಒಂದು ಹೊಸ ಪ್ರಕರಣ
ಕೇರಳದಲ್ಲಿ ಶುಕ್ರವಾರ ಹೊಸದಾಗಿ ಓರ್ವರಿಗೆ ಕೋವಿಡ್-19 ಸೋಂಕು ತಗಲಿದೆ. ಚೆನ್ನೈಯಿಂದ ಬಂದ ಎರ್ನಾಕುಳಂ ನಿವಾಸಿಗೆ ಕೋವಿಡ್-19 ವೈರಸ್‌ ಸೋಂಕು ಬಾಧಿಸಿದೆ. ಇದೇ ವೇಳೆ ಕೇರಳ ರಾಜ್ಯದಲ್ಲಿ 10 ಮಂದಿ ಗುಣಮುಖರಾಗಿದ್ದಾರೆ. ಈ 10 ಮಂದಿಯೂ ಕಣ್ಣೂರು ಜಿಲ್ಲೆ ಯವರು. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆ ಯಲ್ಲಿ 12 ಕೇಸುಗಳನ್ನು ದಾಖಲಿ ಸಲಾಗಿದೆ. 23 ಮಂದಿಯನ್ನು ಬಂಧಿಸಲಾಗಿದ್ದು, 6 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎನ್ನಾರೈಗಳಿಗೆ ಕ್ವಾರೆಂಟೈನ್‌
ವಿದೇಶಗಳಿಂದ ಊರಿಗೆ ಮರಳು ವವರನ್ನು ಜಿಲ್ಲೆಯ ತೆಂಕಣ ಭಾಗದಲ್ಲಿ ಸಜ್ಜುಗೊಳಿಸಲಾದ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ದಾಖಲಿ ಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next