Advertisement
ಕೇರಳದಲ್ಲಿ 1,129 ಪ್ರಕರಣಕೇರಳದಲ್ಲಿ ಶನಿವಾರ 1,129 ಮಂದಿಗೆ ಸೋಂಕು ದೃಢವಾಗಿದೆ. 752 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ತೃಕ್ಕರಿಪುರದ 72 ವರ್ಷದ ವ್ಯಕ್ತಿ ಸೇರಿದಂತೆ 8 ಮಂದಿ ಮೃತ ಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 81ಕ್ಕೇರಿತು. ಬಾಧಿತರಲ್ಲಿ 89 ಮಂದಿ ವಿದೇಶದಿಂದ, 114 ಮಂದಿ ಇತರ ರಾಜ್ಯಗಳಿಂದ ಬಂದವರು. 880 ಮಂದಿಗೆ ಸಂಪರ್ಕದ ಮೂಲಕ ತಗಲಿದೆ. 24 ಮಂದಿ ಆರೋಗ್ಯ ಕಾರ್ಯಕರ್ತರು, 11 ಮಂದಿ ಕೆಎಸ್‌ಇ ಸಿಬಂದಿ, ಐವರು ಕೆಎಲ್‌ಎಫ್ ಸಿಬಂದಿ, ನಾಲ್ವರು ಐಎನ್‌ಎಚ್‌ಎಸ್ ಸಿಬಂದಿ ಬಾಧಿತರಲ್ಲಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಿದ್ದು, 9 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ 292 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.