Advertisement

ಕಾಸರಗೋಡು ಮತ್ತೆ 4 ಮಂದಿಗೆ ಸೋಂಕು

09:48 AM Jun 13, 2020 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಕೋವಿಡ್ ವೈರಸ್‌ ಸೋಂಕು ದೃಢೀಕರಿಸಲಾಗಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 104 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ ಇಬ್ಬರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದಾಧಿಕಾರಿ ಎ.ವಿ.ರಾಮದಾಸ್‌ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರದಿಂದ ಬಂದ 44 ಮತ್ತು 45 ವರ್ಷ ಪ್ರಾಯದ ಮಂಗಲ್ಪಾಡಿಯ ಇಬ್ಬರು ಮಹಿಳೆಯರು. ದುಬಾೖಯಿಂದ ಬಂದ 49 ವರ್ಷ ಪ್ರಾಯದ ಚೆಮ್ನಾಡ್‌ ನಿವಾಸಿ, ಕುವೈಟ್‌ನಿಂದ ಬಂದ 36 ವರ್ಷ ಪ್ರಾಯದ ಮಡಿಕೈ ನಿವಾಸಿಗೆ ರೋಗ ಬಾಧಿಸಿದೆ.
ಮನೆಗಳಲ್ಲಿ 3,220 ಮಂದಿ ಮತ್ತು ಆಸ್ಪತ್ರೆಗಳಲ್ಲಿ 358 ಮಂದಿ ಸಹಿತ 3,578 ಮಂದಿ ನಿಗಾದಲ್ಲಿದ್ದಾರೆ. ಶಂಕಿತ 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳ: 78 ಮಂದಿಗೆ ಸೋಂಕು
ರಾಜ್ಯದಲ್ಲಿ ಶುಕ್ರವಾರ 78 ಮಂದಿಗೆ ಕೋವಿಡ್ ವೈರಸ್‌ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 32 ಮಂದಿ ಗುಣಮುಖರಾಗಿದ್ದಾರೆ.

246 ಮಂದಿ ವಿರುದ್ಧ ಕೇಸು: ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 246 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಲಾಕ್‌ಡೌನ್‌ ಉಲ್ಲಂಘಿಸಿದ ಆರೋಪದಲ್ಲಿ ಐದು ಕೇಸುಗಳನ್ನು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next