Advertisement
ಕೇರಳದಲ್ಲಿ ಶುಕ್ರವಾರ 14 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಣ್ಣೂರು-5, ಕಾಸರಗೋಡು-3, ಇಡುಕ್ಕಿ-2, ಕಲ್ಲಿಕೋಟೆ-2, ಪತ್ತನಂತಿಟ್ಟ ಮತ್ತು ಕೋಟ್ಟಯಂಗಳಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಈ ವರೆಗೆ 295 ಮಂದಿಗೆ ಕೋವಿಡ್ 19 ಸೋಂಕು ತಗಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ 135ಕ್ಕೇರಿದೆ.
ಮೂವರು ಗರ್ಭಿಣಿಯರು, ಐವರು ಮಕ್ಕಳು ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದೃಢವಾಗಿರುವ 128 ಮಂದಿಯಲ್ಲಿ ಮೂವರು ಗರ್ಭಿಣಿಯರು ಮತ್ತು ಐವರು 15 ವರ್ಷಕ್ಕಿಂತ ಕೆಳಗಿನ ಮಕ್ಕಳು. ಗರ್ಭಿಣಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ. ರಾಮದಾಸ್ ತಿಳಿಸಿದ್ದಾರೆ.
Related Articles
Advertisement
ಜಿಲ್ಲೆಯಲ್ಲಿ ಚೆಮ್ನಾಡ್, ಮಧೂರು, ಮೊಗ್ರಾಲ್‌ಪುತ್ತೂರು, ಚೆಂಗಳ, ಪಳ್ಳಿಕೆರೆ, ಉದುಮ ಪಂಚಾಯತ್‌ಗಳು ಮತ್ತು ಕಾಸರಗೋಡು ನಗರಸಭೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ 19 ಬಾಧಿತರಿದ್ದಾರೆ. ಈ ಪ್ರದೇಶಗಳಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ.
ಮೂವರು ದಿಲ್ಲಿ ಸಮಾವೇಶದಿಂದ ಮರಳಿದವರುಶುಕ್ರವಾರ ಸೋಂಕು ದೃಢವಾದವರಲ್ಲಿ ಮೂವರು ದಿಲ್ಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿ ವಾಪಸಾಗಿ ನಿಗಾದಲ್ಲಿದ್ದವರು. ಇನ್ನೋರ್ವ ಗುಜರಾತ್ ನಿವಾಸಿ. ರಾಜ್ಯದಲ್ಲಿ ಒಟ್ಟು 1,69,997 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,69,291 ಮಂದಿ ಮನೆಗಳಲ್ಲೂ, 706 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ರಾಣಿ ನಿವಾಸಿಗಳಾದ ದಂಪತಿ ಹಾಗೂ ಅವರಿಗೆ ಶುಶ್ರೂಷೆ ನೀಡಿದ ದಾದಿ ಗುಣಮುಖರಾಗಿ ಕೋಟ್ಟrಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಬಿಡುಗಡೆಗೊಂದ್ದಾರೆ. ಎ. 3ರಂದು ರಾಜ್ಯದಲ್ಲಿ 154 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 251 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.