ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 99 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢಗೊಂಡಿದೆ. 99 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 103 ಮಂದಿ ರೋಗ ಮುಕ್ತರಾಗಿದ್ದಾರೆ.
ರೋಗ ಬಾಧಿತರು : ನೀಲೇಶ್ವರ-5, ಕಯ್ಯೂರು-ಚೀಮೇನಿ-3, ಚೆಮ್ನಾಡ್-22, ಉದುಮ-3, ಬೇಡಡ್ಕ-1, ಕಾಸರಗೋಡು-1, ಪಳ್ಳಿಕೆರೆ-5, ಚೆಂಗಳ-6, ಬದಿಯಡ್ಕ-6, ಕಾಂಞಂಗಾಡ್-19, ಕೋಡೋಂ ಬೇಳೂರು-6, ಕುಂಬಳೆ-4, ಅಜಾನೂರು-8, ತೃಕ್ಕರಿಪುರ-1, ಪುಲ್ಲೂರು ಪೆರಿಯ-1, ಚೆರ್ವತ್ತೂರು-1, ಕಳ್ಳಾರ್-1, ಕುತ್ತಿಕ್ಕೋಲ್-5, ಮಧೂರು-1 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 2375 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಮಂಗಳವಾರ 2375 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 1456 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 61 ಮಂದಿ ವಿದೇಶದಿಂದ, 118 ಮಂದಿ ಇತರ ರಾಜ್ಯಗಳಿಂದ ಬಂದವರು. 2142 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 49 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹಾಗು 5 ಮಂದಿ ಐಎನ್‌ಎಚ್‌ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
ರೋಗ ಬಾಧಿತರು : ತಿರುವನಂತಪುರ-391, ಕಲ್ಲಿಕೋಟೆ-260, ತೃಶ್ಶೂರು-227, ಆಲಪ್ಪುಳ-170, ಎರ್ನಾಕುಳಂ-163, ಪಾಲ್ಗಟ್-152, ಕಣ್ಣೂರು-150, ಕಾಸರಗೋಡು-99, ಪತ್ತನಂತಿಟ್ಟ-93, ಕೊಲ್ಲಂ-87, ಕೋಟ್ಟಯಂ-86, ವಯನಾಡು-37, ಇಡುಕ್ಕಿ-6 ಎಂಬಂತೆ ರೋಗ ಬಾಧಿಸಿದೆ. ಇದೇ ಸಂದರ್ಭದಲ್ಲಿ 10 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗಿರುವುದಾಗಿ ದೃಢೀಕರಿಸಲಾಗಿದೆ. ಇದರೊಂದಿಗೆ ಒಟ್ಟು ಸಾವಿಗೀಡಾದವರ ಸಂಖ್ಯೆ 244 ಕ್ಕೇರಿತು.
ರೋಗ ಮುಕ್ತರು : ತಿರುವನಂತಪುರ-303, ಕೊಲ್ಲಂ-57, ಪತ್ತನಂತಿಟ್ಟ-32, ಆಲಪ್ಪುಳ-60, ಕೋಟ್ಟಯಂ-67, ಇಡುಕ್ಕಿ-37, ಎರ್ನಾಕುಳಂ-85, ತೃಶ್ಶೂರು-90, ಪಾಲಾ^ಟ್-119, ಮಲಪ್ಪುರಂ-240, ಕಲ್ಲಿಕೋಟೆ-140, ವಯನಾಡು-32, ಕಣ್ಣೂರು-99, ಕಾಸರಗೋಡು-95 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 21232 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40,343 ಮಂದಿ ರೋಗ ಮುಕ್ತರಾಗಿದ್ದಾರೆ.