ಕಾಸರಗೋಡು: “ಮೋದಿ ಗ್ಯಾರಂಟಿ’ ಸಂದೇಶದೊಂದಿಗೆ ಬಿಜೆಪಿ ಕೇರಳ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಜ. 27 ರಿಂದ ಕಾಸರಗೋಡಿನಿಂದ ಆರಂಭ ಗೊಳ್ಳಲಿರುವ ಪಾದಯಾತ್ರೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸುವರು. ಸಂಜೆ 3 ಗಂಟೆಗೆ ತಾಳಿಪಡ್ಪು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾಸರಗೋಡಿನಿಂದ ಪ್ರಯಾಣ ಆರಂಭಿಸಲಿರುವ ಪಾದಯಾತ್ರೆ ಒಂದು ತಿಂಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.
ಪಾದಯಾತ್ರೆ ಜತೆಗೆ ಬಿಜೆಪಿ ಅಭಿವೃದ್ಧಿ ಸಭೆಗಳನ್ನೂ ಆಯೋಜಿಸಲಿದೆ. ಇದರಲ್ಲಿ ಸಮಾಜದ ವಿವಿಧ ಸ್ತರಗಳ ಗಣ್ಯರನ್ನು ಆಹ್ವಾನಿಸಿ ಪಾಲ್ಗೊಳ್ಳುವಂತೆ ಮಡ ಲಾಗುವುದು. ಯಾತ್ರೆ ಮಧ್ಯೆ ವಿವಿಧೆ ಡೆ ಸಮ್ಮೇಳನಗಳನ್ನೂ ಆಯೋಜಿಸಲಾಗುವುದು. ಕೇಂದ್ರ ಸರಕಾರ ಜಾರಿಗೊಳಿಸಲಿರುವ ಜನಪರ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ.
ಕೇಂದ್ರ ಸರಕಾರ ಕೇರಳಕ್ಕೆ ಮಂಜೂರು ಮಾಡಿರುವ ವಿವಿಧ ಯೋಜನೆಗಳು, ಅನುದಾನ, ಜಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳು, ನೆರವಿನ ಬಗ್ಗೆ ಕಾರ್ಯಕ್ರಮದಲ್ಲಿ ವಿವರಿಸ ಲಾಗುವುದು. ಪಾದಯಾತ್ರೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ, ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶಗಳಿಗೆ ಬಿಜೆಪಿ ನೇತಾರರು ತೆರಳಿ ಅವರು ಎದುರಿಸುತ್ತಿರುವ ಸಮಸ್ಯಗಳ ಬಗ್ಗೆ ಪಟ್ಟಿ ತಯಾರಿಸಿ, ವರದಿ ತಯಾರಿಸ ಲಾಗುವುದು. ರಾಜ್ಯದ ಪ್ರತೀ ಲೋಕಸಭಾ ಕ್ಷೇತ್ರದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಪಕ್ಷ ಆಯೋಜಿಸಿರುವ ಜಾಥಾದಲ್ಲಿ ಕೇಂದ್ರ, ರಾಜ್ಯ ಮುಖಂಡರು ಪಾಲ್ಗೊಳ್ಳುವರು ಎಂದು ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.