Advertisement

ದೇಶದ ಮೊದಲ ಡಿಜಿಟಲ್‌ ಸಾಕ್ಷರತಾ ಜಿಲ್ಲೆ ಕಾಸರಗೋಡು; ಮುಂದಿನ ತಿಂಗಳು ಅಧಿಕೃತ ಘೋಷಣೆ

11:53 PM Feb 06, 2024 | Team Udayavani |

ಕಾಸರಗೋಡು: ಸ್ಮಾರ್ಟ್‌ ಫೋನ್‌ನ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ಪಂಚಾಯತ್‌ ಜಾರಿಗೊಳಿಸಿರುವ ಸಂಪೂರ್ಣ ಡಿಜಿಟಲ್‌ ಸಾಕ್ಷರತಾ ಯೋಜನೆ ಕೊನೆಯ ಹಂತದಲ್ಲಿದೆ.

Advertisement

38 ಗ್ರಾಮ ಪಂಚಾಯತ್‌ಗಳಲ್ಲೂ, 3 ನಗರಸಭೆಗಳಲ್ಲೂ ಜಾರಿಗೊಳ್ಳಲಿರುವ ಯೋಜನೆಯ ಶೇ. 80ಕ್ಕೂ ಹೆಚ್ಚು ತರಗತಿಗಳನ್ನು ಪೂರ್ತಿಗೊಳಿಸಲಾಗಿದೆ. 1,01,272 ಮಂದಿ ಯೋಜನೆಯ ಮೂಲಕ ಡಿಜಿಟಲ್‌ ಸಾಕ್ಷರತೆ ಗಳಿಸಿದ್ದಾರೆ.

ಜಿಲ್ಲೆಯಲ್ಲಿ ಸ್ಮಾರ್ಟ್‌ ಫೋನ್‌ ಉಪಯೋಗಿಸುವ 30ರಿಂದ 60ರ ನಡುವಿನ ಪ್ರಾಯದವರಿಗೆ ಇ-ಮೇಲ್‌ ಐಡಿ, ಖಾಸಗಿ ತನ ಹಾಗೂ ಸುರಕ್ಷಿತ, ಬಿಲ್‌ ಪಾವತಿ ವ್ಯವಹಾರ, ಕ್ಯು ಆರ್‌ ಕೋಡ್‌ ಸ್ಕ್ಯಾನಿಂಗ್‌, ಗೂಗಲ್‌ ಪೇ ಆಧಾರದಲ್ಲಿರುವ ವ್ಯವಹಾರಗಳು, ಸರಕಾರಿ ಸೇವೆಗಳು, ಡಿಜಿಟಲ್‌ ಲಾಕರ್‌ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಬಗ್ಗೆ ಈ ಯೋಜನೆಯಲ್ಲಿ ತಿಳಿಸಲಾಗುತ್ತಿದೆ. 20ರಿಂದ 30 ಮಂದಿ ಒಂದು ತರಗತಿಯಲ್ಲಿದ್ದು, 2 ಗಂಟೆ ತರಗತಿ ನಡೆಸಲಾಗುತ್ತದೆ.

ಜಿಲ್ಲೆ ಸಂಪೂರ್ಣ ಡಿಜಿಟಲ್‌ ಸಾಕ್ಷರತೆ ಘೋಷಣೆಯನ್ನು ಮುಂದಿನ ತಿಂಗಳ ಕೊನೆಗೆ ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲಾ ಮಟ್ಟದ ಘೋಷಣೆಯೊಂದಿಗೆ ಕಾಸರಗೋಡು ಜಿಲ್ಲೆ ಭಾರತದಲ್ಲೇ ಪ್ರಥಮವಾಗಿ ಡಿಜಿಟಲ್‌ ಸಾಕ್ಷರತೆ ಪೂರ್ತಿಗೊಳಿಸಿದ ಜಿಲ್ಲೆಯಾಗಿ ಬದಲಾಗಲಿದೆ. ಜಿಲ್ಲೆಯಲ್ಲಿ ಮೊದಲು ಡಿಜಿಟಲ್‌ ಪಂಚಾಯತ್‌ ಆಗಿ ಅಜಾನೂರು ಪಂಚಾಯತನ್ನು ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next