Advertisement

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

10:53 PM Dec 23, 2024 | Team Udayavani |

ವಡೋದರ: ಭಾರತಕ್ಕೆ ಪ್ರವಾಸ ಬಂದಿರುವ ವೆಸ್ಟ್‌ ಇಂಡೀಸ್‌ ಮಹಿಳಾ ತಂಡ, ಆತಿಥೇಯ ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕಾಗಿ ಮಂಗಳವಾರ ವಡೋದರದಲ್ಲಿ ಕಣಕ್ಕಿಳಿಯಲಿದೆ.

Advertisement

ಆರಂಭಿಕ ಪಂದ್ಯ ಗೆದ್ದು ಹುರುಪಿನಲ್ಲಿರುವ ಹರ್ಮನ್‌ಪ್ರೀತ್‌ ಕೌರ್‌ ಪಡೆ ಈ ಪಂದ್ಯವನ್ನೂ ಜಯಿಸಿ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.

ಆರಂಭಿಕ ಪಂದ್ಯವನ್ನು ಭರ್ಜರಿ 211 ರನ್ನುಗಳಿಂದ ಗೆದ್ದುಕೊಂಡಿರುವ ಭಾರತ ಸರಣಿಯಲ್ಲಿ ಈಗಾಗಲೇ 1-0ಯ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಟಿ20 ಸರಣಿಯಲ್ಲೂ ಭಾರತ ವಿಂಡೀಸ್‌ಗೆ 2-1ರ ಸೋಲುಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next