Advertisement

Kasaragod ಎಂಡಿಎಂಎ ಪ್ರಕರಣ: 10 ವರ್ಷ ಕಠಿನ ಸಜೆ

11:39 PM Jul 14, 2024 | Team Udayavani |

ಕಾಸರಗೋಡು: ಮಾದಕ ಪದಾರ್ಥ ಎಂಡಿಎಂಎ ಮಾರಾಟ ಮಾಡಲೆತ್ನಿಸಿದ ಪ್ರಕರಣದಲ್ಲಿ ಮುಳಿಯಾರು ಗ್ರಾಮದ ಪೊವ್ವಲ್‌ ಹೌಸ್‌ನ ನೌಶಾದ್‌ ಶೇಕ್‌ (39)ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (2) 10 ವರ್ಷ ಕಠಿನ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

Advertisement

ದಂಡ ಪಾವತಿಸದಿದ್ದಲ್ಲಿ 3 ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2021 ಮಾರ್ಚ್‌ 20ರಂದು ಪಿಲಿಕುಂಜೆಯಿಂದ ಪೊಲೀಸರು 150 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದರು.

ಉಪ್ಪಳ: ಅಂಗಡಿಯಿಂದ ನಗದು ಕಳವು
ಉಪ್ಪಳ: ಧರ್ಮತ್ತಡ್ಕದ ಮೊಹಮ್ಮದ್‌ ಶಿಹಾಬ್‌ ಅವರ ಸ್ಟೇಷನರಿ ಅಂಗಡಿ ಹಾಗೂ ಫ್ಯಾನ್ಸಿ ಸಾಮಗ್ರಿ ಹೊಂದಿರುವ ಅಂಗಡಿ ಮತ್ತು ಸಮೀಪದ ಕುಂಞಾಲಿ ಅವರ ದಿನಸಿ ಅಂಗಡಿಯಿಂದ ಕಳವು ಮಾಡಲಾಗಿದೆ. ಮೊಹಮ್ಮದ್‌ ಶಿಹಾಬ್‌ ಅವರ ಅಂಗಡಿಯಿಂದ 30 ಸಾವಿರ ರೂ. ಕಳವು ಮಾಡ ಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next