Advertisement

ಕಾಸರಗೋಡು: ಕನ್ನಡ ಕಲಿತರೆ ಕೇರಳ ಕರ್ನಾಟಕ ಎರಡೂ ರಾಜ್ಯಗಳಲ್ಲೂ ಉದ್ಯೋಗ

07:10 AM Aug 01, 2017 | |

ನೀರ್ಚಾಲು: ಇತ್ತೀಚೆಗೆ ಕರ್ನಾಟಕ ಸರಕಾರವು ಹೊರಡಿಸಿದ ಸುತ್ತೋಲೆ ಪ್ರಕಾರ ವಿಶ್ವದ ಯಾವುದೇ ಭಾಗದಲ್ಲಿ 1 ರಿಂದ 10 ನೇ ತರಗತಿಯವರೆಗೆ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ನೇರ ಉದ್ಯೋಗ ನೋಂದಾವಣೆಗೆ ಅವಕಾಶ ಕಲ್ಪಿಸಿಕೊಟ್ಟ ಕಾರಣ ಕಾಸರಗೋಡಿನ ಕನ್ನಡಿಗರಿಗೆ ಕೇರಳ ಮತ್ತು ಕರ್ನಾಟಕದಲ್ಲಿ ಉದ್ಯೋಗ ಲಭಿಸುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಕೂಡಲೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸಲು ಹೆತ್ತವರು ತಯಾರಾಗಬೇಕೆಂದು ನಿವೃತ್ತ ರಿಜಿಸ್ಟ್ರಾರ್‌ ಹಾಗೂ ಸಂಘಟಕ ಮೊಹಮ್ಮದಲಿ ಪೆರ್ಲ ಅಭಿಪ್ರಾಯಪಟ್ಟರು.

Advertisement

ಅವರು ನೀರ್ಚಾಲಿನಲ್ಲಿ ಅಕ್ಟೋಬರ್‌ 14-15ರಂದು ನಡೆಯಲಿರುವ ಕನ್ನಡ ಸಿರಿ ಉತ್ಸವದ ಪೂರ್ವಭಾವಿಯಾಗಿ ನೀರ್ಚಾಲಿನಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದರು.

ಇದರಿಂದಾಗಿ ಕಾಸರಗೋಡಿನಲ್ಲಿ ಕನ್ನಡ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಹಾಗೂ ಕನ್ನಡ ನಿರ್ನಾಮದ ಭೀತಿ ತೊಲಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ| ಎ. ಶ್ರೀನಾಥ್‌ ಕಾಸರಗೋಡು ತುಳು ಕನ್ನಡಿಗರನ್ನು ಪರಸ್ಪರ ಬೇರ್ಪಡಿಸುವ ಷಡ್ಯಂತರಗಳು ನಿರಂತರವಾಗಿ ನಡೆಯುತ್ತಿವೆೆ. ಇಲ್ಲಿ ತುಳುವರು ಬೇರೆಯಲ್ಲ ಕನ್ನಡಿಗರು ಬೇರೆಯಲ್ಲ. ಇಲ್ಲಿನ ಮೂಲನಿವಾಸಿ ತುಳುವರೇ ಇಲ್ಲಿನ ಕನ್ನಡಿಗರು ಎಂದು ಅಭಿಪ್ರಾಯಪಟ್ಟರು. ಕಾಸರಗೋಡಿನ ಬಗ್ಗೆ ವಿಕಿಪೀಡಿಯಾದಲ್ಲಿ ನೋಡಿದಾಗ ಕಾಸರಗೋಡಿನ ಅಧಿಕೃತ ಭಾಷೆಯಾಗಿ ಮಲಯಾಳ ಮತ್ತು ತುಳು ಎಂದು ಇದೆ. ಆದರೆ ತುಳುವಿಗೆ ಯಾವುದೇ ಸ್ಥಾನಮಾನ ಸಿಕ್ಕಿದ ಬಗ್ಗೆ ಮಾಹಿತಿಯಿಲ್ಲ. ಜೊತೆಗೆ ಕನ್ನಡವನ್ನೂ ಅಧಿಕೃತ ಭಾಷೆಯಾಗಿ ಉಲ್ಲೇಖೀಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಜಯದೇವ ಖಂಡಿಗೆ ಮಾತನಾಡಿ ಕಾಸರಗೋಡಿನ ಕನ್ನಡಿಗರು ಪರಸ್ಪರ ವೈಮನಸ್ಸನ್ನು ಬಿಟ್ಟು ಒಂದಾಗಿ ದುಡಿದರೆ ಮಾತ್ರ ನಮ್ಮ ಶಕ್ತಿಪ್ರದರ್ಶನ ಮಾಡಲು ಸಾಧ್ಯವಿದೆ. ಸಾಮಾನ್ಯನಲ್ಲೂ ಕನ್ನಡದ ಅಭಿಮಾನ ಹೆಚ್ಚಿಸುವಂತೆ ಮಾಡಲು ಕನ್ನಡ ಸಿರಿ ಉತ್ಸವ ಸಹಕಾರಿಯಾಗಬಲ್ಲದು. ಆದುದರಿಂದ ಪ್ರತಿಯೊಬ್ಬರೂ ಒಂದೇ ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು. ಅಲ್ಲದೆ ಕಾಸರಗೋಡಿನ ಎಲ್ಲ ಕನ್ನಡ ನೇತಾರರನ್ನು ಗೌರವ ಮಾರ್ಗದರ್ಶಕರನ್ನಾಗಿ ಸಮಿತಿಯಲ್ಲಿ ಸೇರ್ಪಡಿಸಲು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಆನಂದ ಕೆ. ಮವ್ವಾರು, ರಾಮಪ್ಪ ಮಂಜೇಶ್ವರ, ಎಂ.ಎಚ್‌. ಜನಾರ್ದನ, ಎನ್‌.ಜಿ. ರಾಮಕೃಷ್ಣ ಭಟ್‌, ಲಕ್ಷಿ$¾à, ಸುಶೀಲಾ ಕೆ. ಪದ್ಯಾಣ, ಶೈಲಜಾ ಎ., ಆಮು ಅಡ್ಕಸ್ಥಳ, ಪಿ. ನಾರಾಯಣ ಶೆಟ್ಟಿ, ಕೃಷ್ಣ ಕೆ., ಪ್ರದೀಪ್‌ ಶೆಟ್ಟಿ ಬೇಳ, ಸದಾಶಿವ ಮಾಸ್ತರ್‌ ಪೊಯೆ ಮೊದಲಾದವರು ಸಂದಭೋìಚಿತವಾಗಿ ಮಾತನಾಡಿದರು.

Advertisement

ಡಾ| ರಾಜೇಶ್‌ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿ ಪಿ.ಎಸ್‌. ಸ್ವಾಗತಿಸಿದರು. ಮಂಜುನಾಥ ಡಿ. ಮಾನ್ಯ ವಂದಿಸಿದರು.

ಇತ್ತೀಚೆಗೆ ನಡೆದ ಕನ್ನಡ ಹೋರಾಟದಲ್ಲಿ ಹಲವರ ಮೇಲೆ ಕೇಸು ದಾಖಲುಗೊಂಡಿದೆ. ಇದರ ವಿರುದ್ಧ  ನ್ಯಾಯಾಂಗ ಹೋರಾಟಕ್ಕೆ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ. ಸಮ್ಮೇಳನದ ಮುಖಾಂತರ ಕನ್ನಡ ಪರ ಹೋರಾಟಕ್ಕೆ ಆರ್ಥಿಕ ಕ್ರೋಢೀಕರಣವೂ ಆಗಬೇಕಿದೆ.
ಪ್ರದೀಪ್‌ ಶೆಟ್ಟಿ ಬೇಳ. ಕಾರ್ಯದರ್ಶಿ,
 ಕನ್ನಡ ಅಧ್ಯಾಪಕರ ಸಂಘ ಕುಂಬಳೆ ಉಪಜಿಲ್ಲಾ ಸಮಿತಿ

ಬದಿಯಡ್ಕದಲ್ಲಿ ನಡೆಯುತ್ತಿರುವ ತುಳುವೆರೆ ಆಯನೊದಂತಹ‌ ಕಾರ್ಯಕ್ರಮದಿಂದ ತುಳುವಿಗೆ ವಿಶ್ವದಲ್ಲಿಯೇ ಸ್ಥಾನಮಾನ ಲಭಿಸಿದಂತಾಗಿದೆ. ಆದುದರಿಂದ ಅದೇ ರೀತಿ ಕನ್ನಡ ಸಿರಿ ಉತ್ಸವವೂ ನಡೆದರೆ ಕಾಸರಗೋಡಿನ ಜನರಲ್ಲಿ ಕನ್ನಡ ಪ್ರೀತಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
 – ಆನಂದ ಕೆ ಮವ್ವಾರು. ಉಪಾಧ್ಯಕ್ಷರು, ಕುಂಬಾxಜೆ ಗ್ರಾಮ ಪಂಚಾಯತ್‌

ಕನ್ನಡ ಸಿರಿ ಉತ್ಸವಕ್ಕೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಒಟ್ಟುಗೂಡಿಸುವ ಕೆಲಸವಾಗಬೇಕು. ಇದಕ್ಕೆ ವಿಮುಖ ತೋರಿಸುವ ನೇತಾರರ ನೈಜ ಕನ್ನಡ ಪ್ರೇಮ ಏನೆಂಬುದು ಕನ್ನಡಿಗರು ಅರಿಯುತ್ತಾರೆ. ಆದುದರಿಂದ ಎಲ್ಲಾ ಕನ್ನಡಿಗರೂ ಒಕ್ಕೊರಲಿನಿಂದ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕಾದುದು ಅನಿವಾರ್ಯ.
-ಎಂ. ಎಚ್‌. ಜನಾದ‌ìನ

ಕಾಸರಗೋಡಿನ ಕನ್ನಡಿಗರು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು. ಕನ್ನಡಪರ ಅಭ್ಯರ್ಥಿಗಳಿಲ್ಲದಿದ್ದರೆ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಬೇಕು. ಆಗ ಮಾತ್ರ ಕನ್ನಡದ ಶಕ್ತಿಪ್ರದರ್ಶನವಾಗಲು ಸಾಧ್ಯವಿದೆ. ಅದಕ್ಕೆ ಕನ್ನಡ ಸಿರಿ ಉತ್ಸವ ಪೂರಕವಾಗಲಿ.
– ರಾಮಪ್ಪ ಮಂಜೇಶ್ವರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next