Advertisement

Kasaragod: ಪಟಾಕಿ ದುರಂತ; ಜಾಮೀನು ರದ್ದಿಗೆ ತಡೆಯಾಜ್ಞೆ

08:46 PM Nov 19, 2024 | Team Udayavani |

ಕಾಸರಗೋಡು: ನೀಲೇಶ್ವರ ಅಂಞೂಟಂಬಲ ವೀರರ್‌ ಕಾವು ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವದ ಅಂಗವಾಗಿ ನಡೆದ ಸುಡುಮದ್ದು ಪ್ರದರ್ಶನದ ವೇಳೆ ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ಆರೋಪಿಗಳ ಜಾಮೀನು ರದ್ದುಪಡಿಸಿ ಕಾಸರಗೋಡು ಪ್ರಿನ್ಸಿಪಲ್‌ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ನೀಡಿದ ತೀರ್ಪಿಗೆ ಕೇರಳ ಹೈಕೋರ್ಟ್‌ ಎರಡು ವಾರಗಳ ಅವಧಿಗೆ ತಡೆಯಾಜ್ಞೆ ಹೊರಡಿಸಿದೆ.

Advertisement

ಈ ಪ್ರಕರಣದಲ್ಲಿ ಆರೋಪಿಗಳಾದ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿ ಚಂದ್ರಶೇಖರನ್‌ ಮತ್ತು ಕೆ.ಟಿ.ಭರತನ್‌ ಹಾಗು ಪಟಾಕಿ ಪ್ರದರ್ಶಿಸಿದ ರಾಜೇಶ್‌ ಕೊಟ್ರಚ್ಚಾಲ್‌ಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ(2) ಜಾಮೀನು ನೀಡಿತ್ತು. ಆ ಪೈಕಿ ಚಂದ್ರಶೇಖರನ್‌ ಮತ್ತು ಭರತನ್‌ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ರಾಜೇಶ್‌ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ಮಧ್ಯೆ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಆರೋಪಿಗಳ ಜಾಮೀನನ್ನು ಕಾಸರಗೋಡು ಪ್ರಿನ್ಸಿಪಲ್‌ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ರದ್ದುಪಡಿಸಿತ್ತು. ಇದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿದ ಹೈಕೋರ್ಟ್‌ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ನೀಡಿದ ಆದೇಶಕ್ಕೆ ಎರಡು ವಾರಗಳ ತನಕ ತಡೆಯಾಜ್ಞೆ ನೀಡಿದೆ. ಈ ವಿಷಯವನ್ನು ಡಿ.9 ರಂದು ಹೈಕೋರ್ಟ್‌ ಮತ್ತೆ ಪರಿಶೀಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next