Advertisement
ಹೀಗೊಂದು ಕತೆಐಶ್ವರ್ಯ ದೇವತೆಯಾಗಿ ಭೂಮಿಗಾಗಮಿಸಿದ ಲಕ್ಷ್ಮಿà ದೇವಿಯು ಬಿಸಿಲಿನ ಬೇಗೆ ತಡೆಯಲಾಗದೆ ವಿಶ್ರಾಂತಿಗಾಗಿ ಪಕ್ಕದಲ್ಲಿರುವ ಮರವನ್ನು ಆಶ್ರಯಿಸಿದಳಂತೆ. ತನಗೆ ನೆರಳಿತ್ತ ವೃಕ್ಷವನ್ನು ಪ್ರೀತಿಯಿಂದ ದೇವಿ ಸ್ಪರ್ಶಿಸಲು ತಕ್ಷಣ ಮರದ ತುಂಬಾ ಚಿನ್ನದ ಬಣ್ಣದ ಹೂಗಳು ಅರಳಿದುವಂತೆ. ಆದುದರಿಂದಲೇ ಬಿಸಿಲಲ್ಲೂ ಈ ಹೂವು ಸುಂದರವಾಗಿ ಶೋಭಿಸುವುದು ಮಾತ್ರವಲ್ಲದೆ ಐಶ್ವರ್ಯದ ದ್ಯೋತಕವೂ ಆಗಿರುವುದು ಎಂದು ಬಲ್ಲವರು ಹೇಳುತ್ತಾರೆ.
ಕಕ್ಕೆ ಹೂವು, ಸ್ವರ್ಣ ಪುಷ್ಪ ಎಂದೆಲ್ಲ ಕರೆಯಲ್ಪಡುವ ಕೊನ್ನೆ ಹೂವು ಥೆ„ಲಾಂಡ್ ದೇಶದ ರಾಷ್ಟ್ರೀಯ ಪುಷ್ಪ ಹಾಗೂ ಕೇರಳದ ರಾಜ್ಯ ಪುಪುಷ್ಪವಾಗಿದೆ. ವರ್ಷದ ಒಂದೆರಡು ತಿಂಗಳು ಮಾತ್ರ ಅರಳಿ ನಗುವ ಕೊನ್ನೆ ಶಿವನಿಗೆ ಪ್ರಿಯ. ಔಷಧೀಯ ಸಸ್ಯ
ಕೊನ್ನೆ ಮರದ ಹೂ ಮತ್ತು ಕಾಯಿ ಎರಡೂ ಔಷಧೀಯ ಗುಣ ಹೊಂದಿದ್ದು ವಾತ ಸಂಬಂಧಿ ರೋಗಗಳಿಗೆ ಹೆಚ್ಚಾಗಿ ಬಳಕೆಯಾಗುತ್ತದೆ. ಮರದ ತೊಗಟೆಯು ಚರ್ಮ ಹದಮಾಡಲು ಉಪಯೋಗಿಸಲಾಗುತ್ತದೆ. ಚಿಗುರಿನೊಂದಿಗೆ ಜೋತಾಡುವ ಉದ್ದನೆಯ ಹಳದಿ ಬಣ್ಣದ ಹೂಗೊಂಚಲುಗಳು, ಸುಮಾರು ಎರಡು ಮೀಟರು ಉದ್ದದ ಕಂದುಬಣ್ಣದ ಕಾಯಿಗಳು ಈ ಮರದ ತುಂಬಾ ಜೋತಾಡುತ್ತಿರುತ್ತದೆ.
Related Articles
ವಿಷು ಕಣಿಯಲ್ಲಿ ಪ್ರಧಾನ ಆಕರ್ಷಣೆಯಾಗಿರುವ ಕೊನ್ನೆ ಹೂಗಳನ್ನು ವಿಷು ಹತ್ತಿರಾದಂತೆ ಮಾರುಕಟ್ಟೆಗಳಲ್ಲಿ ಮಾರಾಟಕ್ಕಿಡುತ್ತಾರೆ. ಪೇಟೆಯಲ್ಲಿ ವಾಸಿಸುವ ಜನರಿಗೆ ಈ ಹೂವು ಸುಲಭವಾಗಿ ಲಭ್ಯವಾಗದೇ ಇರುವುದರಿ ಂದ ಮಾರುಕಟ್ಟೆಯಲ್ಲಿ ಒಂದು ಗೊಂಚಲಿಗೆ 50-100 ರೂಗೆ ಮಾರಾಟವಾಗುತ್ತದೆ.
Advertisement
ಮೀನ ಮಾಸ ಅರ್ಧದಲ್ಲಿ ಸುವರ್ಣ ನಕ್ಷತ್ರಗಳಂತೆ ಮರದ ರೆಂಬೆಗಳನ್ನು ಅಲಂಕರಿಸುವ ಈ ಹೂಗಳು ಪ್ರತಿವರ್ಷ ಬೆಸಗೆಯಲ್ಲಿ ಅರಳುತ್ತವೆ. ಕಾಲ ಬದಲಾದರೂ ಆಚರಣೆಗಳು ಮಹತ್ವ ಕಳೆದುಕೊಂಡರೂ, ವಿಷುವಿನ ಸಮƒದ್ಧಿಯ ಹಿರಿಮೆ ಗತಕಾಲ ಸೇರುವ ದಿನ ದೂರವಿಲ್ಲ ಎನ್ನುವಾಗಲೂ ಪ್ರಕೃತಿ ಮಾತ್ರ ಎಲ್ಲವನ್ನೂ ಒಡಲಲ್ಲಿ ಮುಚ್ಚಿಟ್ಟು ಕಾಲ ಕಾಲಕ್ಕೆ ತೆರೆದಿಡುವ, ಹಬ್ಬ ಹರಿದಿನಗಳನ್ನು ನೆನಪಿಸುವ ಕಾರ್ಯ ಮಾಡುತ್ತಲೇ ಇದೆ.
ನಮ್ಮ ವಿಶಿಷ್ಟವಾದ ಸಂಪದ್ಭರಿತವಾದ ಆಚರಣೆಯಲ್ಲಿ ಕೊನ್ನೆ ಹೂವಿಗೆ ಪ್ರತ್ಯೇಕ ಸ್ಥಾನವಿದೆ. ಹೊಸ ವರ್ಷದ ಆದಿಯಲಿ ಪ್ರಕೃತಿಯ ಮಡಿಲಲ್ಲಿ ಶೋಭಿಸುವ ಲಕ್ಷ್ಮಿಯ ಕರ ಸ್ಪರ್ಶದಿಂದ ಅರಳಿದ ಹೂಗಳಿಗೆ ಪವಿತ್ರ, ಪೂಜನೀಯ ಸ್ಥಾನವನ್ನೂ ನೀಡಲಾಗಿದೆ. ಸಮೃದ್ಧಿಯ ಸಂಕೇತವಾದ ಸ್ವರ್ಣ ಪುಷ್ಪ ಅಥವಾ ಕೊನ್ನೆ ಹೂವನ್ನು ನೀಡಿ ವಿವಿಧ ಪಕ್ಷಗಳ ಅಭ್ಯರ್ಥಿಗಳನ್ನು ಸ್ವಾಗತಿಸುವ ಮೂಲಕ ಜನರ ಪ್ರೀತಿ, ಗೌರವ ಹಾಗೂ ಮುಂದಿನ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಲು ಇದೊಂದು ಮುನ್ನುಡಿಯಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ. ಚಿತ್ರ, ವರದಿ: ಅಖಿಲೇಶ್ ನಗುಮುಗಮ್