ಕಾಸರಗೋಡು: ಜಿಲ್ಲೆಯ ರಾಣಿಪುರದ ದಟ್ಟ ಅಡವಿಯಲ್ಲಿ ರಾತ್ರಿ ಹೊತ್ತಿನಲ್ಲಿ ಹಸುರು ಬಣ್ಣದಲ್ಲಿ ಹೊಳೆಯುವ ಅತೀ ಅಪರೂಪದ ಹಾಗೂ ಪ್ರಕೃತಿ ವಿಸ್ಮಯವಾಗಿರುವ ಅಣಬೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ವೈಜ್ಞಾನಿಕವಾಗಿ ಫಿಲೋಟೊಲೆಟಸ್ ಮ್ಯಾನಿಪುಲಾರಿಸ್ ಎಂದು ಕರೆಯುಲ್ಪಡುವ ಈ ಶಿಲೀಂದ್ರಗಳು ಜೀವ ರಾಸಾಯನಿಕ ಪ್ರಕ್ರಿಯೆಯ ಮೂಲಕ ಬೆಳಕನ್ನು ಚಿಮ್ಮುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಕೇರಳ ಅರಣ್ಯ ಮತ್ತು ವನ್ಯ ಜೀವಿ ಇಲಾಖೆಯ ಕಾಸರಗೋಡು ವಿಭಾಗ ಮತ್ತು ಮಶ್ರೂಮ್ಸ್ ಆಫ್ ಇಂಡಿಯಾ ಕಮ್ಯೂನಿಟಿ ಜಂಟಿಯಾಗಿ ರಾಣಿಪುರದ ದಟ್ಟ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆಯ ಸಂದರ್ಭದಲ್ಲಿ ಈ ಜೈವಿಕವಾಗಿ ಪ್ರಕಾಶ ಬೀರುವ ಅಣಬೆ ಪತ್ತೆಯಾಯಿತು.
ಸಮೀಕ್ಷೆಯ ವೇಳೆ 50ಕ್ಕೂ ಅಧಿಕ ಜಾತಿಯ ಅಣಬೆಗಳು ಪತ್ತೆಯಾಗಿದ್ದು, ಅದರಲ್ಲೂ ವಿಶೇಷ ವಾಗಿ ರಾತ್ರಿಯ ವೇಳೆ ಬೆಳಕು ಸೂಸುವ ಬಯೋಲ್ಯುಮಿನೆಸೆಂಟ್ ಅಣಬೆಗಳು ಕಂಡುಬಂದಿದ್ದು ಅಚ್ಚರಿಯಾಗಿದೆ.
ಈ ಅಣಬೆ ಸೇವಿಸಲು ಯೋಗ್ಯವಲ್ಲ. ಅದು ವಿಷಕಾರಿಯಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷಾ ತಂಡದಲ್ಲಿ ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಕೆ.ಅಶ್ರಫ್, ಡಾ| ಜಿನು ಮುರಳೀಧರನ್, ಡಾ| ಸಂತೋಷ್ ಕುಮಾರ್ ಕೂಕಲ್, ಕೆ.ಎಂ.ಅನೂಪ್, ಸಚಿನ್ ಪೈ ಮತ್ತು ಪೂರ್ಣಾ ಸಜಾ° ಮೊದಲಾದವರಿದ್ದರು.
ಕಾಸರಗೋಡಿನ ರಾಣಿಪುರಂನಲ್ಲಿ ಪತ್ತೆಯಾದ ನೈಸರ್ಗಿಕವಾಗಿ ರಾತ್ರಿಯ ಸಂದರ್ಭದಲ್ಲಿ ಬೆಳಕು ಸೂಸುವ ಅಣಬೆ ಕಂಡು ಬಂದಿರುವುದು ಶಿಲೀಂಧ್ರಗಳ ಜೀವ ವೈವಿಧ್ಯತೆಗೆ ಸಂಬಂಧಿಸಿದಂತೆ ಅದ್ಭುತ ಕೊಡುಗೆ ಯಾಗಿದೆ ಎಂದಿದ್ದಾರೆ ಸಸ್ಯ ಶಾಸ್ತ್ರಜ್ಞ ದಿಲೀಪ್ ಕುಮಾರ್ ರೈ.
ಜೀವಕೋಶಗಳಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ರಾತ್ರಿಯಲ್ಲಿ ಹಸುರು ಬಣ್ಣದಲ್ಲಿ ಹೊಳೆಯುತ್ತದೆ. ಇವು ಉಷ್ಣ ವಲಯದ ಆದ್ರìತೆ ಇರುವ ವಾತಾ ವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಸಮೃದ್ಧ ತೇವಾಂಶವುಳ್ಳ ಪರಿಸರವು ಅವುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶ ಒದಗಿಸುತ್ತವೆ ಎಂದಿದ್ದಾರೆ.