ಕಾಸರಗೋಡು: ಕಾಸರಗೋಡು ಪೊಲೀಸರು ಡಿ.3 ರಂದು ರಾತ್ರಿ ಕೂಡ್ಲು ರಾಮದಾಸನಗರ ಸಮೀಪದ ಪಾರೆಕಟ್ಟೆ ತಿರುವು ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ 30.22 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಈ ಸಂಬಂಧ ಮುಳಿಯಾರು ಮಾಸ್ತಿಕುಂಡ್ ನಿವಾಸಿ ಅಶ್ರಫ್ ಅಹಮ್ಮದ್ ಅಬ್ದುಲ್ಲಾ ಶೇಖ್(44)ನನ್ನು ಬಂಧಿಸಿದ್ದಾರೆ. ಸ್ಕೂಟರ್ ವಶಪಡಿಸಲಾಗಿದೆ.
Advertisement
ಮದ್ಯ ಸಹಿತ ಬಂಧನಕಾಸರಗೋಡು: ಕೂಡ್ಲು ರಾಮದಾಸ ನಗರದಿಂದ 3.24 ಲೀಟರ್ ಮದ್ಯ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ ಈ ಸಂಬಂಧ ರಾಮದಾಸನಗರ ಸೂರ್ಲು ನಿವಾಸಿ ಯೋಗೀಶ್ (31)ನನ್ನು ಬಂಧಿಸಿದೆ. ಸ್ಕೂಟರ್ ವಶಪಡಿಸಿಕೊಂಡಿದೆ.
ಬದಿಯಡ್ಕ: ವಿದ್ಯಾಗಿರಿ ಪಿಲಾತ್ತಡ್ಕ ನಿವಾಸಿ ಸುಕುಮಾರನ್ ಕೆ.ಎಂ.(65) ನಾಪತ್ತೆಯಾಗಿರುವುದಾಗಿ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನ.21 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ನೇಣು ಬಿಗಿದು ಯುವಕ ಆತ್ಮಹತ್ಯೆ
ಕಾಸರಗೋಡು: ಬೇಡಡ್ಕ ಪಿಂಡಿಕಡವ್ ನಿವಾಸಿ ನಾರಾಯಣನ್ ಅವರ ಪುತ್ರ ಎನ್.ಅನೀಶ್(32) ರಬ್ಬರ್ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.