ಬದಿಯಡ್ಕ: ಎಂಡಿಎಂಎ ಸಹಿತ ನೆಲ್ಲಿಕಟ್ಟೆ ಅಮೂಸ್ ನಗರದ ಪಾಂಡ್ ಸಿದ್ದಿಕ್ ಯಾನೆೆ ಸಿದ್ದಿಕ್(37)ನನ್ನು ಎರ್ಪಕಟ್ಟೆಯಿಂದ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನಿಂದ 0.37 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.
Advertisement
ತಲೆಮರೆಸಿಕೊಂಡಿದ್ದ ಮೂವರ ಬಂಧನಕುಂಬಳೆ: ವಿವಿಧ ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿರುವ ಪೆರುವಾಡ್ ಕಡಪ್ಪುರದ ಮೊಹಮ್ಮದ್ ಅಲಿ, ಕಾಸರಗೋಡು ತಳಂಗರೆಯ ಅಚ್ಚು ಯಾನೆ ಅಬ್ದುಲ್ ಹಾರಿಫ್ ಹಾಗೂ ಧರ್ಮತ್ತಡ್ಕದ ಮೊಹಮ್ಮದ್ ಅಶ್ರಫ್‌ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು: ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬಂದಿ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಉದುಮ ಪಾಕ್ಯಾರ್ ನಿವಾಸಿ ಮುಹಮ್ಮದ್ ಜಿಸ್ವಾನ್(24)ನನ್ನು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಆಸ್ಪತ್ರೆಯ ಎಂ.ಆರ್.ಐ ಸ್ಕ್ಯಾನಿಂಗ್ ಟೆಕ್ನಿಕಲ್ ಸಿಬ್ಬಂದಿ ಉಳಿಯತ್ತಡ್ಕ ಎಸ್.ಪಿ. ನಗರದ ಅಬ್ದುಲ್ ರಜಾಕ್(38) ಅವರಿಗೆ ಇರಿದು ಗಾಯಗೊಳಿಸಲಾಗಿತ್ತು. ನಾಪತ್ತೆಯಾದ ಮಹಿಳೆ ಪತ್ತೆ
ಕುಂಬಳೆ: ನಾಪತ್ತೆಯಾಗಿದ್ದ ಕಯ್ನಾರು ಕುಡಾಲುಮೇರ್ಕಳ ನಿವಾಸಿ ರಾಬಿಯಾ ಮಂಜಿಲ್‌ನ ಫಾತಿಮತ್ ರಮ್ಲಾ(29) ಅವರನ್ನು ಉಪ್ಪಳ ರೈಲು ನಿಲ್ದಾಣದಿಂದ ಪತ್ತೆಹಚ್ಚಲಾಯಿತು. ಅ.18 ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಸಂಬಂಧಿಕರೊಂದಿಗೆ ಕಳುಹಿಸಿಕೊಡಲಾಯಿತು.
Related Articles
ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಭಜನ ಮಂದಿರ ಹಾಗೂ ವರ್ಕಾಡಿಯ ಇಗರ್ಜಿಯ ಕಾಣಿಕೆ ಹುಂಡಿಗಳಿಂದ ಹಣ ಕಳವು ಮಾಡಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಎರಡೂ ಕಳವು ಪ್ರಕರಣದಲ್ಲಿ ಒಂದೇ ತಂಡ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Advertisement
ಲೈಂಗಿಕ ಕಿರುಕುಳ : ಪತಿ, ಅತ್ತೆ ವಿರುದ್ಧ ಕೇಸು ದಾಖಲುಮುಳ್ಳೇರಿಯ: ನಿರಂತರ ಲೈಂಗಿಕ ಕಿರುಕುಳ ಸಂಬಂಧ ಪತಿ ಹಾಗು ಅತ್ತೆಯ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. 2024 ಜೂನ್ 6 ರಂದು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿಯ ಜತೆಗೆ ಕರ್ನಾಟಕ ವಿಟ್ಲ ನಿವಾಸಿಯ ವಿವಾಹವಾಗಿತ್ತು. ಈ ಸಂದರ್ಭದಲ್ಲಿ 10 ಪವನ್ ಚಿನ್ನಾಭರಣ ನೀಡಲಾಗಿತ್ತು. ಮನೆಯೊಳಗೆ ಕೂಡಿ ಹಾಕಿ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಕೇಸು ದಾಖಲಿಸಲಾಗಿದೆ.