ಕಾಸರಗೋಡು: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಯಿನಾಚಿ ಸಮೀಪದ ಮೈಲಾಟ ದೇವನ್ ಪೊಡಿಚ್ಚರ ಎಕ್ಕಾಲಿರ ನೀತುಕೃಷ್ಣ (21) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಸ್ವಸ್ತಿ ಕ್ಲಬ್‌ನ ಶಿಂಗಾರಿ ಮೇಳದ ಕಲಾವಿದೆಯಾಗಿದ್ದು, ಡಿವೈಎಫ್‌ಐ ಕುಟ್ಟಪುನ್ನ ವಲಯ ನಿರ್ವಾಹಕ ಸಮಿತಿ ಸದಸ್ಯೆಯಾಗಿದ್ದಾಳೆ. ಹೊಲಿಗೆ ಕಾರ್ಮಿಕರಾದ ಕೆ. ಕೃಷ್ಣನ್ ಅವರ ಪುತ್ರಿಯಾಗಿರುವ ನೀತು ಕೃಷ್ಣ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾರಸಿ ಕುಸಿದು ತಲೆಗೆ ಬಿದ್ದು
ಕಾರ್ಖಾನೆ ಸೂಪರ್‌ವೈಸರ್ ಸಾವು
ಕುಂಬಳೆ: ಅನಂತಪುರ ಕೈಗಾರಿಕಾ ಪ್ರಾಂಗಣದ ಮೊನಾರ್ಕ್ ಫ್ಲೆ$çವುಡ್ ಫ್ಯಾಕ್ಟರಿಯ ತಾರಸಿ ಮುರಿದು ತಲೆಗೆ ಬಿದ್ದು ಸೂಪರ್ ವೈಸರ್ ಪಯ್ಯನ್ನೂರು ಕೇಳ್ಳೋತ್ ನಿವಾಸಿ ಅಬ್ದುಲ್ ರೌಫ್(60) ಸಾವಿಗೀಡಾದರು. ತಾರಸಿ ತಲೆ ಮೇಲೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
Advertisement
ಪೆರಿಯ ಅವಳಿ ಕೊಲೆ ಪ್ರಕರಣಸಾಕ್ಷಿದಾರರಿಗೆ ಭದ್ರತೆ ಒದಗಿಸಲು ನ್ಯಾಯಾಲಯ ನಿರ್ದೇಶ
ಕಾಸರಗೋಡು: ಪೆರಿಯ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಪೆರಿಯ ನಿವಾಸಿಗಳಾದ ಶರತ್‌ಲಾಲ್ ಮತ್ತು ಕೃಪೇಶ್ ಅವರನ್ನು ಕೊಲೆಗೈದ ಪ್ರಕರಣದ ಸಾಕ್ಷಿದಾರರ ಪೈಕಿ ಇಬ್ಬರಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲಯ ಪೊಲೀಸರಿಗೆ ನಿರ್ದೇಶ ನೀಡಿದೆ.
ಈ ಕೊಲೆ ಪ್ರಕರಣದ ಸಾಕ್ಷಿದಾರರ ಪೈಕಿ ವೈದ್ಯರೂ ಸಹಿತ ಇಬ್ಬರು ತಮಗೆ ಸಾಕ್ಷಿ ಹೇಳಿಕೆ ನೀಡುವುದರ ವಿರುದ್ಧ ಕೆಲವರಿಂದ ಬೆದರಿಕೆ ಉಂಟಾಗಿದೆಯೆಂದು ಅವರು ಸಾಕ್ಷಿ ಹೇಳುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಮಾತ್ರವಲ್ಲ ತಮಗೆ ಭದ್ರತೆ ನೀಡಬೇಕೆಂದೂ ವಿನಂತಿಸಿಕೊಂಡಿದ್ದರು. 2019 ಫೆ. 17ರಂದು ಪೆರಿಯ ಸಮೀಪ ಕೊಲೆ ಮಾಡಲಾಗಿತ್ತು.
ಮೂವರು ಯುವತಿಯರು ನಾಪತ್ತೆ
ಕಾಸರಗೋಡು: ಪ್ರತ್ಯೇಕ ಪ್ರಕರಣದಲ್ಲಿ ಜಿಲ್ಲೆಯ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಹೊಸದುರ್ಗ ಅಂಬಲತ್ತರ ತಾಯನ್ನೂರು ಕಾಲಿಚ್ಚಾನಡ್ಕದ ಕೆ.ಅನಿತಾ (21) ಆ. 6ರಿಂದ ನಾಪತ್ತೆಯಾಗಿರುವುದಾಗಿ ಅಂಬಲತ್ತರ ಪೊಲೀಸರಿಗೆ ದೂರು ನೀಡಲಾಗಿದೆ.
ಚಿನ್ನ ವಶಕ್ಕೆ
ಕಾಸರಗೋಡು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಉದುಮ ಪೊವ್ವಲ್‌ನ ನಿಜಾಮುದ್ದೀನ್ (44)ನನ್ನು ಬಂಧಿಸಿ 1.100 ಕೆ.ಜಿ. ಚಿನ್ನವನ್ನು ವಶಪಡಿಸಲಾಗಿದೆ. ಉದುಮದ ಅಬ್ದುಲ್ ರಹ್‌ಮಾನ್‌ನನ್ನು ವಶಪಡಿಸಿಕೊಂಡು 1138 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ.