Advertisement
ಎಲ್‌ಡಿಎಫ್‌ನಿಂದ ಮೂವರು ಆಯ್ಕೆಯಾಗಿದ್ದಾರೆ. ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಸಿ.ಎಚ್. ಕುಂಞಂಬು ಉದುಮದಿಂದ ಆಯ್ಕೆಯಾಗಿದ್ದಾರೆ. ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರೂ ಪ್ರಸ್ತುತ ಶಾಸ ಕರೂ ಆಗಿರುವ ಎಂ. ರಾಜಗೋಪಾಲನ್ ತೃಕ್ಕರಿಪುರದಿಂದ ಮರು ಆಯ್ಕೆಯಾಗಿದ್ದಾರೆ. ಸಿಪಿಐ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರೂ ಸಚಿವರೂ ಆಗಿದ್ದ ಇ. ಚಂದ್ರಶೇಖರನ್ ಕಾಂಞಂಗಾಡ್‌ನಿಂದ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಉಳಿದವರಿಬ್ಬರು ಎರಡನೇ ಬಾರಿ ಶಾಸಕರಾಗಿದ್ದಾರೆ.
Related Articles
Advertisement
ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ ಕುಸಿತ ಕಂಡು ಬಂದಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ , ನ್ಯಾಯವಾದಿ ಕೆ. ಶ್ರೀಕಾಂತ್‌ಗೆ ಲಭಿಸಿದ ಮತ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗೆ ದೊರೆತ ಮತಗಳಿಗಿಂತ 5,725 ಕಡಿಮೆಯಾಗಿವೆ.
2016ರಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾಗಿದ್ದ ರವೀಶ ತಂತ್ರಿ ಕುಂಟಾರು ಅವರು 56,120 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಕೆ. ಶ್ರೀಕಾಂತ್ 50,395 ಮತಗಳನ್ನು ಪಡೆಯಲು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ ರ್ಯಾಲಿ ಕೂಡ ಕಾಸರಗೋಡಿನಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದ ಸಚಿವರು ಸಹಿತ ಹಿರಿಯ ಮುಖಂಡರು ಬಂದು ಪ್ರಚಾರ ಕೈಗೊಂಡರೂ ಮತ ಕುಸಿತವುಂಟಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧಿಸಿದ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಸಾಧನೆ ಮಾಡಿದೆ. 2016ರಲ್ಲಿ ಬಿಜೆಪಿ ಪಡೆದ ಮತಗಳಿಗಿಂತ 8,232 ಮತಗಳು ಅಧಿಕ ಲಭಿಸಿವೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಪರ್ಧಿಸಿದ ಉದುಮ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ 825 ಮತಗಳು ಕಡಿಮೆಯಾಗಿವೆ. ಕಾಂಞಂಗಾಡ್ ಮತ್ತು ತೃಕ್ಕರಿಪುರದಲ್ಲಿ ಅನುಕ್ರಮವಾಗಿ 466 ಮತ್ತು 254 ಮತಗಳು ಅಧಿಕವಾಗಿವೆ.