Advertisement
ಗುರುವಾರ ಮುಂಜಾನೆ 4 ಗಂಟೆಗೆ ಹಾಲುಣಿಸಿ ಮಗುವನ್ನು ಮಲಗಿಸಲಾಗಿತ್ತು. ಬೆಳಗ್ಗೆ ಮಗು ಎಚ್ಚರಗೊಂಡಿರಲಿಲ್ಲ. ಇದರಿಂದ ಕೂಡಲೇ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತು. ಹಾಲು ಗಂಟಲಲ್ಲಿ ಸಿಲುಕಿ ಮಗು ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಮನೆಯವರು ತಿಳಿಸಿದ್ದಾರೆ.
ಮುಳಿಯಾರು: ಪಂಚಾಯತ್ ವ್ಯಾಪ್ತಿಯ ಪಾಣೂರು ತೋಟದಮೂಲೆಯಲ್ಲಿ ಚಿರತೆ ಕಂಡು ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಇಲ್ಲಿನ ಮಣಿಕಂಠನ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರಿನ ಅಡಿಭಾಗದಲ್ಲಿ ನಿದ್ದೆ ಮಾಡಿದ ಸಾಕು ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗಿದೆ. ಗುರುವಾರ ಮುಂಜಾನೆ 3.30 ಕ್ಕೆ ಈ ಘಟನೆ ನಡೆದಿದೆ. ನಾಯಿ ಬೊಗಳುವುದನ್ನು ಕೇಳಿ ಮನೆ ಮಂದಿ ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗುವ ದೃಶ್ಯವನ್ನು ಕಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.ಶಾಲೆ, ಅಂಗನವಾಡಿ ಮಕ್ಕಳು ನಡೆದು ಹೋಗುವ ದಾರಿ ಮಧ್ಯೆ ಇರುವ ಮನೆಯಲ್ಲಿ ನಾಯಿಗೆ ಚಿರತೆ ಆಕ್ರಮಿಸಿ ಕಚ್ಚಿಕೊಂಡು ಹೋಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲಿಸುತ್ತಿದ್ದಾರೆ. ಹೆಜ್ಜೆ ಗುರುತನ್ನು ನೋಡಿ ನಾಯಿಯನ್ನು ಕಚ್ಚಿಕೊಂಡು ಹೋಗಿರುವುದು ಚಿರತೆ ಎಂಬುದಾಗಿ ಖಚಿತಪಡಿಸಿದ್ದಾರೆ. ಲಾರಿ ಢಿಕ್ಕಿ ಹೊಡೆಸಿ ಸ್ಕೂಟರ್ ಸವಾರನ ಹತ್ಯೆಗೆ ಯತ್ನ : ಆರೋಪಿಯ ಬಂಧನ
ಕಾಸರಗೋಡು: ಲಾರಿ ಢಿಕ್ಕಿ ಹೊಡೆಸಿ ಸ್ಕೂಟರ್ ಸವಾರ ಎಡನೀರು ಚಾಪಾಡಿ ಬಲ್ಕಿàಸ್ ಹೌಸ್‌ನ ಅಬ್ದುಲ್ ರಹಮಾನ್(65) ಅವರನ್ನು ಮೇಲಿನ ಎಡನೀರಿನಲ್ಲಿ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಡನೀರು ಚಾಪಾಡಿ ನಿವಾಸಿ ಅಬ್ದುಲ್ಲ ಕುಂಞಿ(52)ಯನ್ನು ವಿದ್ಯಾನಗರ ಠಾಣೆ ಪೊಲೀಸರು ಸುರತ್ಕಲ್‌ನಿಂದ ಬಂಧಿಸಿದ್ದಾರೆ. ನ.6 ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಮಸೀದಿಗೆ ಹೋಗುತ್ತಿದ್ದಾಗ ಲಾರಿ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿಯ ವಿರುದ್ಧ ಆದೂರು ಪೊಲೀಸ್ ಠಾಣೆಯಲ್ಲಿ ಇತರ ಮೂರು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement