ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಪಯ್ಯನ್ನೂರಿನ ಎರಡು ಬೂತ್‌ಗಳನ್ನು ಎಲ್.ಡಿ.ಎಫ್. ವಶಪಡಿಸಿಕೊಂಡಿದೆ ಎಂದು ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಆರೋಪಿಸಿದ್ದಾರೆ.
ಪಯ್ಯನ್ನೂರಿನ ಕಾರಮ್ಮಲ್ ಎಎಲ್‌ಪಿ ಶಾಲೆಯ 78 ನೇ ನಂಬ್ರದ ಬೂತ್ ಮತ್ತು ಅನ್ನೂರಿನ 84 ನೇ ನಂಬ್ರದ ಬೂತ್‌ನ್ನು ಎಲ್‌ಡಿಎಫ್ ವಶಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
Advertisement
ಯುಡಿಎಫ್‌ನ ಬೂತ್ ಏಜೆಂಟ್ ಆಗಿರುವ ಡಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಪಿ.ನಾರಾಯಣನ್ ಅವರ ಪುತ್ರ ರಂಜಿತ್ ಅವರು ನಿರಂತರ ಎಲ್‌ಡಿಎಫ್ ಕಳ್ಳ ಮತದಾನವನ್ನು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ರಂಜಿತ್ ಅವರಿಗೆ ಹಲ್ಲೆ ಮಾಡಿದ ಎಲ್‌ಡಿಎಫ್ ಕಾರ್ಯಕರ್ತರು ಮತಗಟ್ಟೆಯಿಂದ ಓಡಿಸಿದ್ದಾಗಿ ಆರೋಪಿಸಿದ್ದಾರೆ. ಗಾಯಾಳು ರಂಜಿತ್ ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ರೀತಿ ಕಾರಮ್ಮಲ್ ಬೂತ್‌ನಲ್ಲಿ ಯುಡಿಎಫ್ ಏಜೆಂಟ್‌ಗೆ ಹಲ್ಲೆ ಮಾಡಿದ ಬಳಿಕ ಬೂತ್‌ನಿಂದ ಓಡಿಸಿದ್ದಾಗಿ ಆರೋಪಿಸಿದ್ದಾರೆ.
ಕಾಸರಗೋಡು: ನಗರದ ಕರಂದಕ್ಕಾಡ್‌ನ ಪೊದೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮಧೂರಿಗೆ ಸಾಗುವ ಬಸ್ ತಂಗುದಾಣ ಸಮೀಪದಲ್ಲಿ ಸುಮಾರು 55 ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಶವ ಮಹಜರು ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೀನುಗಾರಿಕೆ: ಕರ್ನಾಟಕದ ಎರಡು ಬೋಟ್‌ಗಳು ವಶಕ್ಕೆ
ಕಾಸರಗೋಡು: ಕಾಸರಗೋಡು ಕರಾವಳಿ ಪ್ರದೇಶದ ಸಮುದ್ರದಲ್ಲಿ ರಾತ್ರಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಎರಡು ಮೀನುಗಾರಿಕೆ ಬೋಟ್‌ಗಳನ್ನು ಮೀನುಗಾರಿಕ ಇಲಾಖೆಯ ಅಧಿಕಾರಿಗಳು ಮತ್ತು ಶಿರಿಯಾ, ಕಾಸರಗೋಡು ಹಾಗು ತೃಕ್ಕರಿಪುರ ಕರಾವಳಿ ಪೊಲೀಸರು ಸಂಯುಕ್ತ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡರು. ಆಲೀಸಾ ಮತ್ತು ಸಾಗರ್ ಸಂಪತ್ತು ಎಂಬ ಹೆಸರಿನ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
Related Articles
Advertisement