Advertisement

ಅಗಲಿದ ಗಣ್ಯರಿಗೆ ಕಸಾಪ ನುಡಿನಮನ

05:46 PM Feb 22, 2022 | Shwetha M |

ದೇವರಹಿಪ್ಪರಗಿ: ಸಾಧಕರ ಸಾಧನೆಗಳು ನಮಗೆಲ್ಲ ಮಾದರಿಯಾಗಿದ್ದು, ಅವರ ಸಮಾಜಮುಖೀ ಜೀವನವೇ ನಮಗೆಲ್ಲ ಆದರ್ಶಪ್ರಾಯವಾಗಿದೆ ಎಂದು ಪಪಂ ಸದಸ್ಯ ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ರಮೇಶ ಮಸಬಿನಾಳ ಹೇಳಿದರು.

Advertisement

ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಗಣ್ಯರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶ ಕಂಡ ಅಪರೂಪದ ಗಾಯಕಿ ಲತಾ ಮಂಗೇಶ್ಕರ ನಮಗೆಲ್ಲ ಭಾರತ ರತ್ನ ಆಗಿದ್ದಾರೆ. ಸಮನ್ವಯ ಕವಿ ಚೆನ್ನವೀರ ಕಣವಿ, ಭಾವೈಕ್ಯತೆಯ ಸಂತ ಇಬ್ರಾಹಿಂ ಸುತಾರ ಏಕತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಾಗಿದ್ದರು. ಇನ್ನು ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಡಿ. ಪಾಟೀಲ ಕಡು ಬಡತನದಲ್ಲಿ ಜನಿಸಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕಬೂಲ್‌ ಕೊಕಟನೂರ, ಗೌರವ ಕಾರ್ಯದರ್ಶಿ ಎಸ್‌.ಎಸ್‌. ಸಾತಿಹಾಳ ಸೃಷ್ಟಿ ಪಾಟೀಲ, ಪ್ರೇಮಾ ಸುಂಬಡ ಮಾತನಾಡಿದರು. ನಂತರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ಪ್ರಶಸ್ತಿ ವಿತರಿಸಲಾಯಿತು. ಸಂಗನಗೌಡ ಬಿರಾದಾರ, ಗುರುರಾಜ ಆಕಳವಾಡಿ, ಸೋಮಶೇಖರ ಹಿರೇಮಠ, ಸಂಗಪ್ಪ ತಡವಲ್‌, ಗುರನಗೌಡ ಬಿರಾದಾರ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next